
ಸರ್ವೋದಯ ಮಹಿಳಾ ಮಂಡಳಿಯ ಮುಂದಾಳತ್ವದಲ್ಲಿ ಸರ್ವೋದಯ ಯುವಕ ಮಂಡಳಿಯ ಸಹಕಾರದೊಂದಿಗೆ ಎರಡನೆ ವರ್ಷದ ಆಟಿದ ಲೇಸ್ ಕಾರ್ಯಕ್ರಮ ತಾರೀಕು 20/07/2025ನೇ ಆದಿತ್ಯವಾರ ಮಹಾಲಕ್ಷ್ಮೀ ಭಜನಾ ಮಂಡಳಿ ಕಡಾರಿ ಇಲ್ಲಿ ನಡೆಯಿತು. ಸುಮಾರು 40ಕ್ಕೂ ಹೆಚ್ಚಿನ ವಿವಿಧ ಬಗೆಯ ಆಟಿ ತಿನಿಸುಗಳನ್ನು ಮಹಿಳೆಯರು ತಂದಿರುವುದು ಈ ಕಾರ್ಯಕ್ರಮಕ್ಕೆ ಮೆರುಗು ನೀಡಿತು.
ಈ ಸಂದರ್ಭದಲ್ಲಿ ಸರ್ವೋದಯ ಮಹಿಳಾ ಮಂಡಳಿ ಅಧ್ಯಕ್ಷೆ ಶ್ರೀಮತಿ ಸರಸ್ವತಿ ಹೆಗ್ಡೆ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಹಿರಿಯರಾಗಿರುವ ಶ್ರೀಮತಿ ರಾಜೀವಿ ಹೆಗ್ಗಡ್ತಿ ಕಜಕಲಬೆಟ್ಟು ಇವರನ್ನು ಸನ್ಮಾನಿಸಲಾಯಿತು. ತುಳುನಾಡ ವಿಶೇಷ ಪಾರ್ದನ ಹಾಡಿದ, ಕೃಷಿ ಚಟುವಟಿಕೆಯಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಶ್ರೀಮತಿ ಚಿಂದು ಇವರನ್ನು ಕೂಡ ವೇದಿಕೆಯಲ್ಲಿ ಗೌರವಿಸಲಾಯಿತು. ಆಟಿ ತಿಂಗಳ ಮಹತ್ವದ ಬಗ್ಗೆ ಸರ್ವೋದಯ ಯುವಕ ಮಂಡಳಿಯ ಅಧ್ಯಕ್ಷರಾದ ಸದಾನಂದ ಕೋಟ್ಯಾನ್ ತಿಳಿಸಿದರು. ಕಾರ್ಯದರ್ಶಿಯಾಗಿರುವ ಗುರುಪ್ರಸಾದ್ ಶೆಟ್ಟಿ ಇವರು ಮಾತಾನಾಡಿ ಇಂದಿನ ಯುವಜನತೆಗೆ ಹಳೆಯ ಸಂಪ್ರದಾಯವನ್ನು ಪರಿಚಯಿಸುವ ಒಂದು ವಿಶೇಷ ಕಾರ್ಯಕ್ರಮ ಎಂದರು. ವೇದಿಕೆಯಲ್ಲಿ ಮಹಿಳಾ ಮಂಡಳಿ ಹಾಗೂ ಯುವಕ ಮಂಡಳಿಯ ಗೌರವಾಧ್ಯಕ್ಷರಾಗಿರುವ ಅಶೋಕ್ ನಾಯ್ಕ್ ಹಾಗೂ ಮಾಲತಿ ನಾಯ್ಕ್ ಹಾಗೂ ಮಹಿಳಾ ಮಂಡಳಿಯ ಆಪ್ತ ಸಲಹೆಗಾರರಾಗಿರುವ ವಿನಯಾ.ಡಿ.ಬಂಗೇರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಧಾರ್ಮಿಕ ಕಾರ್ಯದರ್ಶಿ ಶ್ರೀಮತಿ ನಂದನ ಸ್ವಾಗತಿಸಿ , ಸದಸ್ಯೆ ಶ್ರೀಮತಿ ಹರಿಣಿ ಧನ್ಯವಾದಗೈದು, ಕಾರ್ಯದರ್ಶಿ ಶ್ರೀಮತಿ ಶುಭಾ ಜಗದೀಶ್ ಕಾರ್ಯಕ್ರಮ ನಿರೂಪಿಸಿದರು.
ಮಹಿಳಾ ಮಂಡಳಿ ಹಾಗೂ ಯುವಕ ಮಂಡಲದ ಪ್ರಮುಖರು, ಪದಾಧಿಕಾರಿಗಳು, ಸದಸ್ಯರು, ಮಕ್ಕಳು, ಸಾರ್ವಜನಿಕ ಬಂಧುಗಳು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.