ಉಡುಪಿ: ಬುಧವಾರ ಕೇಂದ್ರ ಸರ್ಕಾರದ ಪಂಚಾಯತ್ ರಾಜ್ ಇಲಾಖೆಯ ರಾಷ್ಟ್ರೀಯ ಪುರಸ್ಕಾರ ಪ್ರಧಾನ ಸಮಾರಂಭವು ರಾಷ್ಟ್ರಪತಿ ಭವನದಲ್ಲಿ ಜರುಗಿದ್ದು ಶಿಕ್ಷಣ, ತೆರಿಗೆ ಸಂಗ್ರಹ, ಸದೃಢ ಆಡಳಿತ ಸಹಿತ ವಿವಿಧ ವಿಭಾಗದಲ್ಲಿ ಶ್ರೇಷ್ಠ ಸಾಧನೆ ತೋರಿದ ಉಡುಪಿ ಜಿಲ್ಲಾ ಪಂಚಾಯತ್ಗೆ ಈ ಪುರಸ್ಕಾರ ಲಭಿಸಿದ್ದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಜಿಲ್ಲಾ ಪಂಚಾಯತ್ ಸಿಇಒ ಪ್ರತೀಕ್ ಬಾಯಲ್ ಹಾಗೂ ಯೋಜನಾ ನಿರ್ದೇಶಕ ಶ್ರೀನಿವಾಸ ರಾವ್ ಅವರು ಪ್ರಶಸ್ತಿ ಸ್ವೀಕರಿಸಿದ್ದಾರೆ.
ಕೇಂದ್ರ ಸರ್ಕಾರದ ಗ್ರಾಮೀಣ ಅಭಿವೃದ್ಧಿ ಇಲಾಖೆಯಿಂದ ನಾನಾಜಿ ದೇಶಮುಖ್ ಸರ್ವೋತ್ತಮ ಪಂಚಾಯತ್ ಪ್ರಶಸ್ತಿಗೆ ಮೂರನೇ ಅತ್ಯುತ್ತಮ ಜಿಲ್ಲೆಯಾಗಿ ಆಯ್ಕೆಯಾದ ಉಡುಪಿ ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದು ಈ ಪ್ರಶಸ್ತಿಯು 2 ಕೋಟಿ ರೂ. ನಗದನ್ನು ಹೊಂದಿದೆ.