AICTE ಮಾನ್ಯತೆ ಪಡೆದಿದ್ದು ಸುಸಜ್ಜಿತ ಕಟ್ಟಡ ಮತ್ತು ಸುಂದರ ಪರಿಸರವನ್ನು ಒಳಗೊಂಡ ತಾಂತ್ರಿಕ ಶಿಕ್ಷಣ ಇಲಾಖೆಗೆ ಒಳಪಟ್ಟು ಸಂಸ್ಥೆ

ಸರ್ಕಾರಿ ಪಾಲಿಟೆಕ್ನಿಕ್ ಕಾರ್ಕಳ ದಲ್ಲಿ ಪ್ರಥಮ ವರ್ಷದ ಡಿಪ್ಲೋಮಾ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದ್ದು ಆಸಕ್ತ ವಿದ್ಯಾರ್ಥಿಗಳು ದಾಖಲೆಗಳೊಂದಿಗೆ ಸಂಸ್ಥೆಗೆ ಭೇಟಿ ನೀಡಬೇಕು ಎಂದು ಮನವಿ ಮಾಡಲಾಗಿದೆ.
ಕನಿಷ್ಠ ಎಸ್ ಎಸ್ ಎಲ್ ಸಿ/ ಪಿಯುಸಿ/ಐಟಿಐ ಹಾಗೂ ಪಿಯುಸಿ ಸೈನ್ಸ್ ಅಭ್ಯರ್ಥಿಗಳು ಎರಡನೇ ವರ್ಷಕ್ಕೆ ಲ್ಯಾಟರಲ್ ಅಭ್ಯರ್ಥಿಯಾಗಿ ಪ್ರವೇಶ ಪಡೆಯಲು ಅವಕಾಶವಿದ್ದು ಈ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್, ಟೂಲ್ ಕಿಟ್ ಮತ್ತು ವಿದ್ಯಾರ್ಥಿ ವೇತನದ ಜೊತೆಗೆ ವ್ಯಾಸಂಗದ ಸಂದರ್ಭದಲ್ಲಿ ಸಂಸ್ಥೆಯ ಆವರಣದಲ್ಲಿರುವ KGTTI ಜರ್ಮನ್ ಟೆಕ್ನಾಲಜಿ ಇಲ್ಲಿ ಹೆಚ್ಚಿನ ತರಬೇತಿಗೆ ಅವಕಾಶ ಒದಗಿಸಲಾಗಿದೆ.
ಕೋರ್ಸುಗಳ ವಿವರ:
- ಸಿವಿಲ್ ಇಂಜಿನಿಯರಿಂಗ್
- ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್
- ಎಲೆಕ್ಟ್ರಾನಿಕ್ ಅಂಡ್ ಕಮ್ಯುನಿಕೇಷನ್ ಇಂಜಿನಿಯರಿಂಗ್
- ಮೆಕ್ಯಾನಿಕಲ್ ಇಂಜಿನಿಯರಿಂಗ್
2008- 09 ನೇ ಸಾಲಿನಲ್ಲಿ ಪ್ರಾರಂಭಗೊಂಡ ಈ ಸರ್ಕಾರಿ ಪಾಲಿಟೆಕ್ನಿಕ್ ಕಾರ್ಕಳ ಕರ್ನಾಟಕ ಸರ್ಕಾರದ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಗೆ ಒಳಪಟ್ಟು AICTE ದೆಹಲಿಯಿಂದ ಮಾನ್ಯತೆ ಪಡೆದಿದ್ದು ಸುಸಜ್ಜಿತ ಕಟ್ಟಡ ಮತ್ತು ಸುಂದರ ಪರಿಸರವನ್ನು ಹೊಂದಿದೆ. 5,000ಕ್ಕೂ ಹೆಚ್ಚು ಪುಸ್ತಕಗಳನ್ನು ಹೊಂದಿರುವ ವಿಶಾಲವಾದ ಗ್ರಂಥಾಲಯವಿದ್ದು 150 ಕಂಪ್ಯೂಟರ್ ಗಳನ್ನು ಒಳಗೊಂಡ ಪ್ರಯೋಗಾಲಯ, ಉತ್ತಮ ಅಂತರ್ಜಾಲ ವ್ಯವಸ್ಥೆ ಇದೆ. ಸಾಂಸ್ಕೃತಿಕ ಕ್ರೀಡಾ ಎನ್ ಎಸ್ ಎಸ್ ಯುವ ರೆಡ್ ಕ್ರಾಸ್ ಆಂಟಿ ರಾಕಿಂಗ್ ಮತ್ತು ಪ್ಲೇಸ್ಮೆಂಟ್ ಘಟಕಗಳಿದ್ದು ಸರ್ಕಾರದ ಸ್ಕಾಲರ್ಶಿಪ್ ಸೌಲಭ್ಯವು ಇದೆ ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.