ಮೇಜುತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದ ವಿಪಕ್ಷ ನಾಯಕರು

ಬೆಂಗಳೂರು: ವಿರೋಧ ಪಕ್ಷದ ಸದಸ್ಯರು ವಿಧಾನ ಮಂಡಲದ ಇವತ್ತಿನ ಕಾರ್ಯಕಲಾಪಗಳಲ್ಲಿ ಸಭಾಧ್ಯಕ್ಷ ಯುಟಿ ಖಾದರ್ ನೀಡಿದ ರೂಲಿಂಗ್ ಅನ್ನು ಮೇಜುತಟ್ಟಿ ಸ್ವಾಗತಿಸಿದ್ದಾರೆ.
ಅಧಿಕಾರಿಗಳು ಐಎಎಸ್, ಕೆಎಎಸ್-ಯಾವುದೇ ಸ್ತರದವರಾಗಿರಲಿ, ಶಾಸಕರು ಕರೆದಾಗ ಹೋಗಬೇಕು ಮತ್ತು ಅವರು ಕೇಳುವ ಪ್ರಶ್ನೆಗಳಿಗೆ ಸಮಂಜಸ ಉತ್ತರವನ್ನು ಸೌಜನ್ಯಯುತವಾಗಿ ನೀಡಬೇಕು, ಅಗೌರವದಿಂದ ನಡೆದುಕೊಳ್ಳಬಾರದು, ಯಾಕೆಂದರೆ ನಾವೆಲ್ಲ ಬದುಕೋದೇ ಗೌರವಕ್ಕಾಗಿ, ಅದೇ ಸಿಗದಿದ್ದರೆ ಹೇಗೆ? ಸರ್ಕಾರ ಯಾವತ್ತಿಗೂ ಶಾಸಕರ ಪರ ನಿಂತುಕೊಳ್ಳಬೇಕು ಎಂದು ಸ್ಪೀಕರ್ ಹೇಳಿದ್ದು ಈ ವೇಳೆ ವಿರೋಧ ಪಕ್ಷದ ನಾಯಕರು ಮೇಜು ತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.