
ಜುಲೈ 7 ರಂದು ಸರಕಾರಿ ಪದವಿ ಪೂರ್ವ ಕಾಲೇಜು( ಪ್ರೌಢಶಾಲಾ ವಿಭಾಗ) ಸಾಣೂರು ಇಲ್ಲಿ ಅಂತರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆಯ ನಿಮಿತ್ತ ಶೌರ್ಯ ವಿಪತ್ತು ನಿರ್ವಹಣಾ ಘಟಕ, ಸಾಣೂರು,ಇದರ ಅಧ್ಯಕ್ಷರು ಮತ್ತು ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಮಾಧವ ಭಂಡಾರ್ಕರ್ ಅಧ್ಯಕ್ಷತೆಯಲ್ಲಿ ನಶಾ ಮುಕ್ತ ಭಾರತದ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಮುರಳಿಧರ ನಾಯಕ್ ವಿದ್ಯಾರ್ಥಿಗಳಿಗೆ ಸೈಬರ್ ಅಪರಾಧ, ಪೋಕ್ಸೋ ಕಾಯ್ದೆ, ಮಾದಕ ವಸ್ತುಗಳ ಬಳಕೆಯಿಂದ ಆಗುವ ದುಷ್ಪರಿಣಾಮಗಳು ಮೊಬೈಲ್ನ ಬಳಕೆಯಿಂದ ಆಗುವಂತಹ ಹಾನಿಗಳು ಇತ್ಯಾದಿ ವಿಷಯಗಳ ಕುರಿತಂತೆ ವಿವರವಾಗಿ ತಿಳಿಸಿ ಕೊಟ್ಟರು. ಈ ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಾಣೂರು ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಅರುಣಿ, ಮಕ್ಕಳು ಮಾದಕ ವ್ಯಸನದಿಂದ ಯಾವ ರೀತಿಯಲ್ಲಿ ಪಾರಾಗಬಹುದು,ಆ ಮೂಲಕ ಹೇಗೆ ಉತ್ತಮ ವ್ಯಕ್ತಿತ್ವವನ್ನು ರೂಪಿಸಬಹುದು ಎಂದು ತಿಳಿಯ ಪಡಿಸಿದರು.
ಈ ಕಾರ್ಯಕ್ರಮದಲ್ಲಿ ಪ್ರೌಢಶಾಲಾ ವಿಭಾಗದ ಹಿರಿಯ ಶಿಕ್ಷಕರಾದ ಲವೀನಾ ಮೆಲ್ವಿಟಾ ನೊರೊನ್ಹಾ ಹಾಗೂ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸರ್ವ ಸದಸ್ಯರು ,ವಿದ್ಯಾರ್ಥಿ ವೃಂದದವರು ಶಿಕ್ಷಕ ವೃಂದದವರು ಉಪಸ್ಥಿತರಿದ್ದರು ವಿಜ್ಞಾನ ಶಿಕ್ಷಕರಾದ ಅನಿತಾ ರೀಟಾ ರೊಜಾರಿಯೋ ಆಗಮಿಸಿದ ಸರ್ವರನ್ನು ಸ್ವಾಗತಿಸಿದರೆ ಆಂಗ್ಲಭಾಷಾ ಶಿಕ್ಷಕಿಯಾದ ಪೂರ್ಣಿಮಾ ಪ್ರಭು ವಂದನಾರ್ಪಣೆಗೈದರು.ಸಮಾಜ ವಿಜ್ಞಾನ ಶಿಕ್ಷಕರದ ವಿಮಲಾ ಕಾರ್ಯಕ್ರಮ ನಿರೂಪಿಸಿದರು .