ಸರಕಾರಿ ಪದವಿ ಪೂರ್ವ ಕಾಲೇಜು ಸಾಣೂರಿನಲ್ಲಿ ದಿನಾಂಕ 19 .11 2024 ರಂದು ಕನ್ನಡ ಸಾಹಿತ್ಯ ಪರಿಷತ್ ಕಾರ್ಕಳ ತಾಲೂಕು ಇದರ ವತಿಯಿಂದ ಸರಕಾರಿ ಪದವಿ ಪೂರ್ವ ಕಾಲೇಜು ಸಾಣೂರಿನ ಆಶ್ರಯದಲ್ಲಿ “ಕನ್ನಡ ಡಿಂಡಿಮ” ಕಾರ್ಯಕ್ರಮ ನಡೆಯಿತು.
ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಪ್ರಭಾಕರ್ ಶೆಟ್ಟಿ ಕೊಂಡಳ್ಳಿ
ಇವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮವು ನಡೆಯಿತು. ಕು| ಪಲ್ಲವಿ,ಕು| ದೀಪಿಕಾ ಹಾಗೂ ಕು|ಕವನ ಇವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮಕ್ಕೆ ಪ್ರೌಢಶಾಲಾ ವಿಭಾಗದ ಶ್ರೀಮತಿ ವಿಮಲಾ ನಾಯಕ್ ಇವರು ಸರ್ವರನ್ನು ಸ್ವಾಗತಿಸಿದರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದಂತಹ ಶ್ರೀ ಆಶಿಶ್ ಶೆಟ್ಟಿ ,ಸಿಇಒ ಶಿರಡಿ ಸಾಯಿಬಾಬಾ ಕಾಲೇಜು ಕಾರ್ಕಳ
ಇವರು ಮಾತನಾಡಿ ಶಾಲೆಯ ಓದಿನೊಂದಿಗೆ ಸಾಹಿತ್ಯದ ಓದನ್ನು ಮೈಗೂಡಿಸಿಕೊಂಡು, ವಿದ್ಯಾರ್ಥಿ ಜೀವನದಲ್ಲೇ ಸಾಹಿತ್ಯಾಭಿರುಚಿ ಬೆಳೆಸಬೇಕೆಂದರು
“ಸಾಹಿತ್ಯದ ನಡೆ ,ಸಾವಯವ ಕೃಷಿಯ ಕಡೆ” ಎಂಬ ಪರಿಕಲ್ಪನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.ಕು|ಸಿಂಚನ ಹಾಗೂ ಕು|ದೀಕ್ಷಾ ಸಾವಯವ ಕೃಷಿಯ ಬಗ್ಗೆ ಮಾತನಾಡಿದರು.ಕು|ಶಮಾ,ಕು|ಮೇಘ ,ಕು|ರಶ್ಮಿತಾ ಪರಿಸರ ಗೀತೆಗಳನ್ನು ಹಾಡಿದರು
ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ಕಾರ್ಕಳ ತಾಲೂಕು ಘಟಕದ ಅಧ್ಯಕ್ಷ ಶ್ರೀ ಪ್ರಭಾಕರ ಕೊಂಡಳ್ಳಿ ಮಾತನಾಡಿ ಪರೀಕ್ಷೆ ಇರುವಂತದ್ದು, ಉದ್ಯೋಗ ಪಡೆಯುವುದಕ್ಕೆ ಮಾತ್ರವಲ್ಲ ಬದುಕು ಕಟ್ಟಿಕೊಳ್ಳುವುದಕ್ಕೆ, ಜೊತೆಗೆ ವಿದ್ಯಾರ್ಥಿಗಳಲ್ಲಿ ಪ್ರಕೃತಿ ಸಂರಕ್ಷಣೆಯ ಅರಿವು ಮೂಡಬೇಕು. ಪ್ರಕೃತಿ ಮೀರಿದ ಬದುಕು ಸಾಧ್ಯವಿಲ್ಲ ಎನ್ನುತ್ತ ಡಿ ವಿ ಜಿ ಯವರ ಕಗ್ಗದ ಸಾಲುಗಳನ್ನು ಹಾಡಿ,ರಸಧಾರೆಯನ್ನು ಉಣಬಡಿಸುವುದರ ಮೂಲಕ,ಸಾಹಿತ್ಯಾಭಿರುಚಿ ಬೆಳೆಸಬೇಕೆಂದರು.
ಆಂಗ್ಲಭಾಷಾ ಉಪನ್ಯಾಸಕಿ ಡಾ.ಸುಮತಿ ಪಿ ಕಾರ್ಯಕ್ರಮ ನಿರೂಪಿಸಿದರು.ಕನ್ನಡ ಉಪನ್ಯಾಸಕಿ ಶ್ರೀಮತಿ ಪ್ರೇಮಮ್ಮ ಆರ್ ಧನ್ಯವಾದವಿತ್ತರು.ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಶ್ರೀಮತಿ ಸುಚೇತಾ ಕಾಮತ್, ಸಾಣೂರು ಯುವಕ ಸಂಘದ ಪ್ರತಿನಿಧಿಗಳಾದ ಪ್ರಮಿತ್ ಸುವರ್ಣ, ರೋಹಿತ್ ಆರ್.
ಎಸ್.ಡಿ.ಎಂ.ಸಿ ಯ ಅಧ್ಯಕ್ಷರಾದ
ಶ್ರೀ ಮಾಧವ ಭಂಡಾರ್ಕರ್, ಉಪನ್ಯಾಸಕರು,ಅಧ್ಯಾಪಕರು,ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.