ಮೋಹನ್ ಗೌಡ,ಹಿಂದೂ ಜನಜಾಗೃತಿ ಸಮಿತಿ, ರಾಜ್ಯ ವಕ್ತಾರ
ಕರ್ನಾಟಕ ರಾಜ್ಯ ಸರಕಾರವು ಹಿಂದೂ ದೇವಸ್ಥಾನಗಳಿಗೆ ಮಾತ್ರ ಶೇ.10 ರಷ್ಟು ತೆರಿಗೆ ವಿಧಿಸುವ ಉದ್ದೇಶಿತ ತುಘಲಕಿ ಕಾಯ್ದೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು.ಇಲ್ಲವಾದಲ್ಲಿ ,ಇದರ ವಿರುದ್ಧ ಹಿಂದೂಗಳು ಬೀದಿಗಿಳಿದು ತೀವ್ರ ಪ್ರತಿಭಟನೆ ನಡೆಸಬೇಕಾಗುತ್ತದೆ. ಅಲ್ಲದೆ ಹಿಂದೂ ದೇವಸ್ಥಾನಗಳ ನಿಧಿಯನ್ನು ಬೇರೆ ಯಾವುದೇ ಉದ್ದೇಶಕ್ಕೆ ಬಳಸದೆ ದೇವಸ್ಥಾನದ ಅಭಿವೃದ್ಧಿ, ಜೀರ್ಣೋದ್ಧಾರ, ಸಣ್ಣ ದೇವಸ್ಥಾನಗಳಿಗೆ ಆರ್ಥಿಕ ನೆರವು, ದೀಪ-ಬತ್ತಿಗಳಿಗೆ ಮಾತ್ರ ವಿನಿಯೋಗಿಸಬೇಕು.
ಅಲ್ಲದೆ ಕರ್ನಾಟಕ ರಾಜ್ಯದಲ್ಲಿ ಸರಕಾರಿಕರಣಗೊಂಡಿರುವ ಎಲ್ಲಾ ಹಿಂದೂ ದೇವಸ್ಥಾನಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸಿ ಪುನಃ ಭಕ್ತರಿಗೆ ಹಸ್ತಾಂತರಿಸಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯ ಕರ್ನಾಟಕ ರಾಜ್ಯ ವಕ್ತಾರ ಮೋಹನ ಗೌಡ ಇವರು ಕರೆ ನೀಡಿದರು.