
ಬೆಂಗಳೂರು ಬಂಟರ ಸಂಘದ ಉಪಾಧ್ಯಕ್ಷೆ, ಉದ್ಯಮಿ ಹಾಗೂ ಸಮಾಜಸೇವಕಿ, ಬಿಜೆಪಿ ವಕ್ತಾರೆ ಕಾಂತಿ ಶೆಟ್ಟಿಯವರಿಗೆ ‘ಉದ್ಯೋಗ ಯೋಗದಾನ ಪುರಸ್ಕಾರ – 2026’ ಪ್ರಶಸ್ತಿ ಲಭಿಸಿದೆ.
ಕಾಂತಿ ಶೆಟ್ಟಿಯವರು Aircom Solutions Private Limited ಹಾಗೂ ‘ನಮ್ಮ ಕುಟೀರ’ ಸಂಸ್ಥೆಗಳ ಮೂಲಕ ಉದ್ಯಮ ಮತ್ತು ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. Case No. 18/9 ಎಂಬ ಯಶಸ್ವೀ ಕನ್ನಡ ಚಿತ್ರವನ್ನು ಸಹ ನಿರ್ಮಾಪಕಿಯಾಗಿ, ಚೆಲುವಿ ಕನ್ನಡ ಧಾರವಾಹಿಯನ್ನು ನಿರ್ಮಿಸಿರುವ ಶ್ರೀಮತಿ ಕಾಂತಿ ಶೆಟ್ಟಿಯವರು ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಮಾಜಸೇವೆಗಾಗಿ ಇವರಿಗೆ ಈ ಗೌರವ ಪ್ರದಾನಿಸಲಾಯಿತು. ಪ್ರಶಸ್ತಿಯನ್ನು ಚಿತ್ರನಟಿ ಶಿಲ್ಪಾ ಶೆಟ್ಟಿ ಅವರು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಸನ್ಮಾನಿಸಿದರು.























































