
ಬೆಂಗಳೂರು: ಕೈಗಾರಿಕೆಗಳಿಯೇ ಪೂರೈಸುವ ಡೀಸೆಲ್ ದರ ಮಾತ್ರ ಹೆಚ್ಚಳ, ಸದ್ಯಕ್ಕೆ ಬಸ್ ಪ್ರಯಾಣದ ಹೆಚ್ಚಳ ಇಲ್ಲ ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ತಿಳಿಸಿದ್ದಾರೆ.
ಕೈಗಾರಿಕೆಗಳಿಗೆ ಪೂರೈಸುವ ಡೀಸೆಲ್ ದರ 20 ರೂ. ಹೆಚ್ಚಳದಿಂದಾಗಿ ಸರ್ಕಾರಿ ಸಾರಿಗೆ ಬಸ್ ಗಳ ಪ್ರಯಾಣದರ ಏರಿಕೆ ಯಾಗಲಿದೆ ಎಂಬ ಪ್ರಶ್ನೆ ಎದುರಾಗಿದ್ದು, ಈ ಬಗ್ಗೆ ಸಚಿವರು ಸ್ಪಷ್ಟನೆ ನೀಡಿದ್ದಾರೆ.
ಯುದ್ಧದ ಪರಿಣಾಮ ಸಾರಿಗೆ ನಿಗಮಗಳ ಮೇಲು ಬೀರಲಿದ್ದು, ಕೈಗಾರಿಕಾ ಡೀಸೆಲ್ ಬೆಲೆ ಏರಿಕೆಯಾಗಿದೆ. ಆದರೆ ಇದು ತಾತ್ಕಾಲಿಕ ಎಂಬ ಅಭಿಪ್ರಾಯವಿದೆ. ಕೈಗಾರಿಕಾ ಡಿಜಿಲ್ ಬೆಲೆ ತಾತ್ಕಾಲಿಕ ಹೆಚ್ಚಳದಿಂದಾಗಿ ಬಸ್ ಪ್ರಯಾಣ ದರ ಏರಿಕೆ ಮಾಡಲು ಆಗುವುದಿಲ್ಲ ಎಂದಿದ್ದಾರೆ. ಯುದ್ಧ ಸ್ಥಗಿತಗೊಂಡ ಸಂದರ್ಭದಲ್ಲಿ ಸಾಮಾನ್ಯವಾಗಿ ಡೀಸೆಲ್ ಬೆಲೆ ಇಳಿಕೆಯಾಗಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ.






















































