ವರ್ಷಾವಧಿ ನೇಮೋತ್ಸವ
ಏಪ್ರಿಲ್ 1ರಿಂದ ಏ.4 ರವರಿಗೆ

ಕಾರ್ಕಳ: ತಾಲೂಕಿನ ಸಾಣೂರು ಪ್ರದೇಶದಲ್ಲಿರುವ ಶ್ರೀ ಸತ್ಯದೆಕ್ಕಿ ಧರ್ಮರಸು ಕೊಡಮಣಿತ್ತಾಯ, ಕುಕ್ಕಿನಂತಾಯ, ಬ್ರಹ್ಮ ಬೈದರ್ಕಳ ಹಾಗೂ ಮಾಯಂದಾಲೆ ದೇವಿ ಜೋಡುಗರಡಿ ವರ್ಷಾವಧಿ ನೇಮೋತ್ಸವವು ಏಪ್ರಿಲ್ 1ರಿಂದ ಏಪ್ರಿಲ್ 4ರವರೆಗೆ ನಡೆಯಲಿದೆ.
ಧಾರ್ಮಿಕ ವಿಧಿವಿಧಾನಗಳು, ಹೋಮ-ಹವನಗಳು ಮತ್ತು ವಿಶೇಷ ಪೂಜೆಗಳೊಂದಿಗೆ ಈ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಸಮಿತಿ ಸಿದ್ಧತೆ ನಡೆಸಿದ್ದು ,ಏಪ್ರಿಲ್ 1ರಂದು ಸಂಜೆ 5 ಗಂಟೆಗೆ ಶ್ರೀ ಕ್ಷೇತ್ರದ ಧರ್ಮದೈವಗಳ ಭಂಡಾರ ಇಳಿದು, ಭಂಡಾರ ಪ್ರತಿಷ್ಠೆ ಮೂಲಕ ಉತ್ಸವಕ್ಕೆ ಚಾಲನೆ ದೊರೆಯಲಿದೆ.
8 ಗಂಟೆಗೆ ಸಾರ್ವಜನಿಕ ಅನ್ನ ಸಂತರ್ಪಣೆ.
ಏಪ್ರಿಲ್ 2ರಂದು ಬೆಳಿಗ್ಗೆ 10 ಗಂಟೆಯಿಂದ ಶ್ರೀ ಧರ್ಮರಸು ಉಲ್ಲಾಯ ದೈವದ ನೇಮೋತ್ಸವ ಪಲ್ಲಪೂಜೆ, ಒಂದು ಗಂಟೆಗೆ ಸಾರ್ವಜನಿಕ ಅನ್ನ ಸಂರ್ಪಣೆ, ರಾತ್ರಿ 10 ಗಂಟೆಗೆ ಉತ್ಸವ ಬಲಿ,ರಾತ್ರಿ 12 ಶ್ರೀ ಕುಕ್ಕಿನಂತಾಯ ದೈವ ಮತ್ತು ಶ್ರೀ ಕೊಡಮಣಿತ್ತಾಯ ಧರ್ಮ ದೈವದ ನೇಮೋತ್ಸವ ನಡೆಯಲಿದೆ.
ಎಪ್ರಿಲ್ 3ರಂದು ಬೆಳಿಗ್ಗೆ 7 ಗಂಟೆಗೆ ಫಲಹಾರ ನಂತರ ಧರ್ಮದೈವಗಳ ಹರಕೆ ಸ್ವೀಕಾರ ಹಲಾವಳಿಗಳು ಧರ್ಮದೈವದ ಪ್ರಸಾದ ವಿತರಣೆ ,8 ಗಂಟೆಗೆ ಶ್ರೀ ಬ್ರಹ್ಮ ಬೈದರ್ಕಳ ನೇಮೋತ್ಸವ
ಹಾಗೂ ಏಪ್ರಿಲ್ 4ರಂದು ಬೆಳಿಗ್ಗೆ 10:30ರಿಂದ ಮಾಯಂದೆಲೆ ದೇವಿ ನೇಮೋತ್ಸವ ನಡೆಯಲಿದೆ. ಮಧ್ಯಾಹ್ನ 12:30 ರಿಂದ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.
ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದ್ದು, ಎಲ್ಲಾ ವ್ಯವಸ್ಥೆಗಳನ್ನು ಸಮರ್ಪಕವಾಗಿ ಮಾಡಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಎಲ್ಲಾ ಭಕ್ತರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಧರ್ಮ ದೈವಗಳ ಕೃಪೆಗೆ ಪಾತ್ರರಾಗುವಂತೆ ಕ್ಷೇತ್ರದ ಆಡಳಿತ ಮಂಡಳಿ ಮನವಿ ಮಾಡಿದೆ.























































