
ಕಾರ್ಕಳ: ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರದ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ವಿದ್ಯಾ ಯು. ಶೆಟ್ಟಿ ಅವರು ಥೈಲ್ಯಾಂಡ್ ಮಾಸ್ಟರ್ಸ್ ಅಥ್ಲೆಟಿಕ್ ಅಸೋಸಿಯೇಶನ್ ಅನ್ನು ಭಾರತದಿಂದ ಪ್ರತಿನಿಧಿಸುತ್ತಿದ್ದಾರೆ. ಶಾಟ್ ಪುಟ್, ಜಾವಲಿನ್, ಡಿಸ್ಕಸ್ ಮತ್ತು ಹ್ಯಾಮರ್ ಥ್ರೋ ಸ್ಪರ್ಧೆಗಳಲ್ಲಿ ಭಾಗವಹಿಸಲಿರುವರು.
ಈ ಕ್ರೀಡಾಕೂಟವು ಥೈಲ್ಯಾಂಡಿನ ಚಿಯಾಂಗ್ ರೈ ಮುಖ್ಯ ಸ್ಟೇಡಿಯಂ ಇಲ್ಲಿ ಫೆ. 12ರಿಂದ ಫೆ.16 ದಿನಾಂಕದವರೆಗೆ ನಡೆಯಲಿರುವುದು.ಶ್ರೀಮತಿ ವಿದ್ಯಾ ಯು. ಶೆಟ್ಟಿ ಇವರು ಕ್ರೀಡಾ ಕ್ಷೇತ್ರದಲ್ಲಿ ಇನ್ನಷ್ಟು ಮತ್ತಷ್ಟು ಸಾಧನೆಯನ್ನು ಮಾಡುವುದರ ಜೊತೆಗೆ ಮುಂಬರುವ ಕ್ರೀಡಾ ಸ್ಪರ್ಧೆಯಲ್ಲಿ ವಿಜಯ ಶಾಲಿಯಾಗಲಿ ಎಂದು ಶಾಲಾ ಆಡಳಿತ ಮಂಡಳಿಯ ಕೋಶಾಧಿಕಾರಿಯಾದ ಶ್ರೀಯುತ ದಿನೇಶ್ ಕಾಮತ್ , ಪ್ರಾಂಶುಪಾಲರಾದ ಶ್ರೀಮತಿ ಸೋನಲ್ ಆರ್ .ಕಾಮತ್, ಶಾಲಾ ಆಡಳಿತ ಮಂಡಳಿಯ ಸದಸ್ಯರು ಹಾಗೂ ಶಿಕ್ಷಕ ವೃಂದ ಶುಭ ಹಾರೈಸಿದ್ದಾರೆ.