
ಕಾರ್ಕಳ : ದಿನಾಂಕ 06/02/2026 ರಂದು ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರದಲ್ಲಿ ಕರ್ನಲ್ ಪ್ರಮೋದ ಪಿ. ಪ್ರಭು ಅವರು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನವನ್ನು ನೀಡಿದರು.
ಪೂರ್ವಹ್ನ ಆಗಮಿಸಿದ ಗೌರವಾನ್ವಿತ ಅತಿಥಿಯವರನ್ನು ಗೌರವಪೂರ್ವಕವಾಗಿ ಸ್ವಾಗತಿಸಲಾಯಿತು. ಶ್ರೀಯುತರು ಭಾರತೀಯ ಭೂಸೇನೆಯಲ್ಲಿ ಜಮ್ಮು, ಕಾಶ್ಮೀರ, ಪಶ್ಚಿಮ ಬಂಗಾಳ ಅಸ್ಸಾಂ, ಅಮೃತ್ ಸರ್, ಜೈಸಾಲ್ಮರ್, ಸಿಯಾಚಿನ್, ಕಾರ್ಗಿಲ್, ವೆಸ್ಟ್ ಬೆಂಗಾಲ್ ಸೇರಿದಂತೆ ವಿವಿಧ ಕಡೆಗಳಲ್ಲಿ ಹಾಗೂ ಸತತ 27ವರ್ಷಗಳ ಕಾಲ ಇನ್ಫಾoಟ್ರಿ ಬ್ಯಾಟಲಿಯನ್ ನಲ್ಲಿ ಸೇವೆಯನ್ನು ಸಲ್ಲಿಸಿರುತ್ತಾರೆ. ಶ್ರೀಯುತರು ರಾಷ್ಟ್ರೀಯ ಶಿಕ್ಷಣ ಸೇವೆಗಳ ಕುರಿತು ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ ಹಾಗೂ ಶಿಸ್ತಿನ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನವನ್ನು ನೀಡಿದರು. ನಂತರ ಅತಿಥಿಯವರನ್ನು ಶಾಲು ಹೊದಿಸಿ, ಫಲ -ಪುಷ್ಪ ಹೂಗುಚ್ಛ ನೀಡಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲರಾದ ಶ್ರೀಮತಿ ಸೋನಲ್ ಆರ್. ಕಾಮತ್, ಉಪಪ್ರಾಂಶುಪಾಲರಾದ ಶ್ರೀಮತಿ ಸುಜಾತ. ಕೆ, ಶಿಕ್ಷಕ -ಶಿಕ್ಷಕೇತರ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



















