
ಕಾರ್ಕಳ: ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರದಲ್ಲಿ ದಿನಾಂಕ 24/10/2025 ರಂದು AICS ಧ್ವೈಮಾಸಿಕ ಸಭೆಯನ್ನು ಆಯೋಜಿಸಲಾಯಿತು. ಈ ಸಭೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಎಲ್ಲಾ CBSE ಮತ್ತು ICSC ಶಾಲೆಗಳ ಪ್ರಾಂಶುಪಾಲರು ಭಾಗವಹಿಸಿದರು.
ಈ ಕಾರ್ಯಕ್ರಮದಲ್ಲಿ ಗೌರವಾನ್ವಿತ ಅತಿಥಿಗಳಾಗಿ DIET ಕಾಲೇಜು ಉಡುಪಿ ಇಲ್ಲಿಯ ಪ್ರಾಂಶುಪಾಲರಾದ ಪ್ರೋಫೆಸರ್ ಶ್ರೀಯುತ ಅಶೋಕ್ ಕಾಮತ್ ಹಾಗೂ AICS ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಆಯೋಜಿಸಿದ ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರದ ಶಾಲಾ ಅಧ್ಯಕ್ಷರಾದ ಶ್ರೀಯುತ ಡಾ.ಪ್ರಶಾಂತ್ ಹೆಗ್ಡೆ ಹಾಗೂ ಶಾಲಾ ಆಡಳಿತ ಮಂಡಳಿಯ ಸದಸ್ಯರು, ಪ್ರಾಂಶುಪಾಲರಾದ ಶ್ರೀಮತಿ ಸೋನಲ್ ರವೀಂದ್ರ ಕಾಮತ್ ಉಪಸ್ಥಿತರಿದ್ದರು. ಈ ಸಭೆಯಲ್ಲಿ ವಿವಿಧ ಶೈಕ್ಷಣಿಕ ಹಾಗೂ ಕ್ರೀಡಾ ವಿಷಯಗಳ ಬಗ್ಗೆ ಚರ್ಚಿಸಿ ತೀರ್ಮಾನವನ್ನು ಕೈಗೊಳ್ಳಲಾಯಿತು.



















































