
ಕಾರ್ಕಳ: ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರದಲ್ಲಿ ಆ .8 ರಂದು ರಕ್ಷಾಬಂಧನ ದಿನಾಚರಣೆಯನ್ನು ಅರ್ಥವತ್ತಾಗಿ ಆಚರಿಸಲಾಯಿತು.
ವಿದ್ಯಾರ್ಥಿಗಳು ಸಾಂಪ್ರದಾಯಿಕ ವಸ್ತ್ರ ಧರಿಸಿ ಈ ಕಾರ್ಯಕ್ರಮಕ್ಕೆ ಮೆರುಗನ್ನು ನೀಡಿದರು. ವಿದ್ಯಾರ್ಥಿಗಳು ರಾಖಿ ತಯಾರಿಕೆಯಲ್ಲಿ ಭಾಗವಹಿಸಿ, ರಾಖಿಯನ್ನು ತಯಾರಿಸಿ ಆರತಿ ಬೆಳಗಿ ವಿಶೇಷ ಬಾಂಧವ್ಯ ಕಾಪಾಡಲು, ಪ್ರೀತಿ- ಗೌರವ ರಕ್ಷಣೆಯ ಸಂಕೇತವಾದ ರಾಖಿಗಳನ್ನು ತಮ್ಮ ತಮ್ಮ ತರಗತಿಯ ವಿದ್ಯಾರ್ಥಿಗಳಿಗೆ ಕಟ್ಟಿದರು. ಈ ದಿನದ ವಾತಾವರಣವು ಸಂತೋಷ ಹಾಗೂ ಉತ್ಸಾಹದಿಂದ ತುಂಬಿತ್ತು.
