
ಕಾರ್ಕಳ: ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರದಲ್ಲಿ ದಿನಾಂಕ 10/07/2025ರಂದು ಗುರು ಪೂರ್ಣಿಮಾ ದಿನಾಚರಣೆಯನ್ನು ಭಕ್ತಿ ಹಾಗೂ ಕೃತಜ್ಞತಾ ಪೂರ್ವಕವಾಗಿ ಆಚರಿಸಲಾಯಿತು.
ವಿದ್ಯಾರ್ಥಿಗಳು ತಮ್ಮ ಜೀವನದ ದಾರಿದೀಪಗಳಾದ ಗುರುಗಳನ್ನು ಗೌರವಿಸಲು ಮತ್ತು ಕೃತಜ್ಞತೆ ಸಲ್ಲಿಸಲು ಈ ಪವಿತ್ರ ಸಂದರ್ಭದಲ್ಲಿ ಸೇರಿದರು. ಕಾರ್ಯಕ್ರಮದ ಅಂಗವಾಗಿ ಆಧ್ಯಾತ್ಮಿಕ ಗುರುಗಳಾದ ಪರಮ ಪೂಜ್ಯ ಶ್ರೀ ಶ್ರೀ ರವಿಶಂಕರ ಗುರೂಜಿಯವರಿಗೆ ಗುರುಪೂಜೆ ಮತ್ತು ಸತ್ಸಂಗ ಕಾರ್ಯಕ್ರಮ ನಡೆಯಿತು. ಶ್ರೀ ಶ್ರಿ ರವಿಶಂಕರ ಗುರೂಜಿಯವರ ಮಾತಿನಂತೆ “ಗುರು ಅಜ್ಞಾನವನ್ನು ದೂರ ಮಾಡುವವನು ಮತ್ತು ಜ್ಞಾನ ಪ್ರಕಾಶದ ರೂಪವಾಗಿರುವವನು”. ಈ ಗುರುಪೂರ್ಣಿಮೆಯ ಪ್ರಯುಕ್ತ ಮಕ್ಕಳು ತಮ್ಮ ಮೊದಲ ಗುರುಗಳಾದ ಹೆತ್ತವರಿಗೆ ಶುಭಾಶಯ ಪತ್ರಗಳನ್ನು ಕೊಟ್ಟು ಆಶೀರ್ವಾದವನ್ನು ಪಡೆದರು.ನಮ್ಮ ಶಾಲಾ ಶಿಕ್ಷಕಿಯರಾದ ಶ್ರೀಮತಿ ಆಶಾಲತಾ ಹಾಗೂ ಶ್ರೀಮತಿ ಅನುಸೂಯ ಇವರು ವಿದ್ಯಾರ್ಥಿಗಳೊಂದಿಗೆ ತಾವು ಕಲಿತ ಅತ್ತೂರು ಸಂತ ಲೋರೆನ್ಸ್ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಬದುಕಿನ ಪಥವನ್ನು ತೋರಿದ ಪ್ರೀತಿಯ ಗುರುಗಳಿಗೆ ಹೃದಯಪೂರ್ವಕ ನಮನವನ್ನು ಸಲ್ಲಿಸಿದರು ಜೊತೆಗೆ ಶಾಲಾ ಉಪ ಪ್ರಾಂಶುಪಾಲರಾದ ಶ್ರೀಮತಿ ಸುಜಾತ.ಕೆ ಹಾಗೂ ಸಹ ಶಿಕ್ಷಕಿಯರಾದ ಶ್ರೀಮತಿ ಶೋಭಾ, ಶ್ರೀಮತಿ ಸುಜಯ ದೇವಾಡಿಗ, ಶ್ರೀಮತಿ ನಳಿನಿ ಸಂಪನ್ಮೂಲ ವ್ಯಕ್ತಿಗಳಾದ ಮಂಜುನಾಥ ಪೈ ಇವರಿಗೆ ಪಾದಪೂಜೆಯನ್ನು ಮಾಡಿ ಫಲ ಪುಷ್ಪ ಹಾಗೂ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಿದರು.