
ಕಾರ್ಕಳ: ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರದಲ್ಲಿ ದಿನಾಂಕ 19/06/2025ರಂದು ಖ್ಯಾತ ಮಲಯಾಳಿ ಸಾಹಿತಿ ಹಾಗೂ ಶಿಕ್ಷಣ ತಜ್ಞ ಪಿ .ಎನ್.ಪಾಣಿಕ್ಕರ್ ಅವರ ಸ್ಮರಣಾರ್ಥವಾಗಿ ಮಕ್ಕಳಲ್ಲಿ ಓದುವ ಅಭ್ಯಾಸವನ್ನು ಹೆಚ್ಚಿಸುವ ಹಾಗೂ ಪುಸ್ತಕಗಳ ಮಹತ್ವವನ್ನು ಒತ್ತಿ ಹೇಳುವ ಉದ್ದೇಶದಿಂದ ಇಂದು ಶಾಲೆಯಲ್ಲಿ ರಾಷ್ಟ್ರೀಯ ಓದು ದಿನವನ್ನು ಆಚರಿಸಲಾಯಿತು. ಶಾಲಾ ಗ್ರಂಥ ಪಾಲಕಿ ಶ್ರೀಮತಿ ಅನಿತಾ ಇವರು ಈ ದಿನಾಚರಣೆಯನ್ನು ಆಯೋಜಿಸಿದರು.