
ಕಾರ್ಕಳ: ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರದಲ್ಲಿ ವಿಶ್ವ ಅಪ್ಪಂದಿರ ದಿನಾಚರಣೆ ಪ್ರಯುಕ್ತ ಪರಿಸರ ಸಂರಕ್ಷಣೆಯ ಉದ್ದೇಶವನ್ನು ಇಟ್ಟುಕೊಂಡು ಪ್ರತಿಯೊಬ್ಬರೂ ಒಂದು ಗಿಡ ನೆಡುವ ಸದುದ್ದೇಶದಿಂದ “ಒಂದು ಗಿಡ ನೆಡೋಣ” ಎಂಬ ಪ್ರೇರಣಾತ್ಮಕ ಘೋಷ ವಾಕ್ಯವನ್ನು ಆಧಾರವಾಗಿ ಇಟ್ಟುಕೊಂಡು ಪೂರ್ವ ಪ್ರಾಥಮಿಕ ಶಾಲಾ ಮಕ್ಕಳಿಗೆ “ಸೀಡ್ ಬಾಂಬಿಂಗ್” ಕಾರ್ಯಕ್ರಮವನ್ನು ನಡೆಸಲಾಯಿತು.

ಈ ಕಾರ್ಯಕ್ರಮದಲ್ಲಿ ಮಕ್ಕಳು ತಮ್ಮ ಶಿಕ್ಷಕರು ಶಾಲೆಯಲ್ಲಿ ಸಿದ್ಧಪಡಿಸಿ ವಿತರಿಸಿದ ಹಲವಾರು ತಳಿಯ ಸಸ್ಯ ಬೀಜಗಳನ್ನು ಮಣ್ಣಿನೊಡನೆ ಸೇರಿಸಿ ತಮ್ಮ ತಮ್ಮ ಮನೆಗಳಲ್ಲಿ ಅಪ್ಪಂದಿರೊಟ್ಟಿಗೆ ನೆಟ್ಟು, ಸಂಭ್ರಮಿಸಿದರು.



















