
ಕಾರ್ಕಳ: ಶ್ರೀ ಶ್ರೀ ರವಿಶಂಕರ್ ವಿದ್ಯಾಮಂದಿರದಲ್ಲಿ ದಿನಾಂಕ 22/02/2025ರಂದು ಬನ್ನಿ, ಕಬ್,ಬುಲ್ಬುಲ್,ಸ್ಕೌಟ್ ಆಂಡ್ ಗೈಡ್ಸ್ ವತಿಯಿಂದ ಪೂರ್ವ ಪ್ರಾಥಮಿಕದಿಂದ ಹತ್ತನೇ ತರಗತಿಯವೆರೆಗಿನ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು.
ಪೂರ್ವ ಪ್ರಾಥಮಿಕ ಶಾಲಾ ಮಕ್ಕಳಿಗೆ ಶ್ಲೋಕ ಪಠಣ,ಹನುಮಾನ್ ಚಾಲೀಸ್,ಚಿತ್ರಕಲಾ ಸ್ಪರ್ಧೆ,ಪ್ರಾಥಮಿಕ ಶಾಲಾ ಮಕ್ಕಳಿಗೆ ಭಜನೆ,ಭಗವದ್ಗೀತೆ ಪಠಣ,ಗಾಳಿಪಟ,ಫೇಸ್ ಮಾಸ್ಕ್,ಎಲೆಗಳಿಂದ ಕ್ರಾಫ್ಟ್ ತಯಾರಿ,ಚಿತ್ರಕಲಾ ಸ್ಪರ್ಧೆ,ಪ್ರೌಢಶಾಲಾ ಮಕ್ಕಳಿಗೆ ಭಜನೆ,ಭಕ್ತಿಗೀತೆ,ದೇಶಭಕ್ತಿ ಗೀತೆ,ಫೇಸ್ ಮಾಸ್ಕ್,ಎಲೆಗಳಿಂದ ಕ್ರಾಫ್ಟ್,ಗಾಳಿಪಟ ತಯಾರಿ,ಚಿತ್ರಕಲಾ ಸ್ಪರ್ಧೆಗಳನ್ನು ಆಯೋಜಿಸಲಾಯಿತು.