
. ಕಾರ್ಕಳ, ಏಪ್ರಿಲ್ 3: “ಮೌಲ್ಯಮಾಪನ ಮತ್ತು ಕಲಿಕಾ ಕ್ರಮಗಳನ್ನು ಬಲಪಡಿಸುವುದು” ಎಂಬ ವಿಷಯದ ಮೇಲೆ ಆಧಾರಿತ ಎರಡು ದಿನಗಳ ಸಾಮರ್ಥ್ಯ ನಿರ್ಮಾಣ ಕಾರ್ಯಕ್ರಮ ಏಪ್ರಿಲ್ 1 ಮತ್ತು 2, 2025 ರಂದು ಶ್ರೀ ಭುವನೇಂದ್ರ ವಸತಿ ಶಾಲೆ ಕಾರ್ಕಳದಲ್ಲಿ ನಡೆಯಿತು. ಶ್ರೀ ಶ್ರೀ ರವಿಶಂಕರ್ ವಿದ್ಯಾ ಮಂದಿರ ಕಾರ್ಕಳ ಸೇರಿದಂತೆ ವಿವಿಧ ಶಾಲೆಗಳ ಶಿಕ್ಷಕರು ಈ ಕಾರ್ಯಾಗಾರದಲ್ಲಿ ಸಕ್ರಿಯವಾಗಿ ಭಾಗವಹಿಸಿದರು.
ಈ ತರಬೇತಿ ಕಾರ್ಯಕ್ರಮವು ರಾಷ್ಟ್ರೀಯ ಶಿಕ್ಷಣ ನೀತಿಯ ಅಂಗವಾಗಿ ತರಗತಿಯಲ್ಲಿ ಮೌಲ್ಯಮಾಪನ ತಂತ್ರಗಳನ್ನು ಉತ್ತೇಜಿಸುವ ಉದ್ದೇಶದಿಂದ ನಡೆಸಲಾಯಿತು. ಈ ಕಾರ್ಯಾಗಾರವನ್ನು ಶ್ರಿ ಶ್ರೀ ರವಿಶಂಕರ ವಿದ್ಯಾಮಂದಿರ ಮಂಗಳೂರು ಶಾಲೆಯ ಪ್ರಾಂಶುಪಾಲರಾದ ಶ್ರೀ ಸುರೇಶ್ ಮಹಾಲಿಂಗಪುರ ಮತ್ತು ಎಸ್ . ಎಂ.ಎಸ್ ಬ್ರಹ್ಮಾವರ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಅಭಿಲಾಷಾ ಅವರು ನಡೆಸಿಕೊಟ್ಟರು .
ಈ ಕಾರ್ಯಕ್ರಮ ಉತ್ಸಾಹಭರಿತವಾಗಿ ಮುಕ್ತಾಯಗೊಂಡು, ಶಿಕ್ಷಕರಿಗೆ ತಮ್ಮ ದೈನಂದಿನ ಬೋಧನೆಯಲ್ಲಿ ಈ ಕಲಿತ ವಿಷಯಗಳನ್ನು ಅನ್ವಯಿಸಲು ಪ್ರೇರಣೆಯಾಯಿತು.