ಸಾವಿತ್ರಿ ಮನೋಹರ್ ಕಾರ್ಕಳ

ಶ್ರೀ ರಾಮ ಜಯರಾಮ
ಜಯ ಜಯ ರಾಮ…
ಗುಡಿ ಗೋಪುರಗಳಲ್ಲಿ
ಗವಿಗುಹ್ವಾರ ರಗಳಲ್ಲಿ
ತರುಲತೆಗಳ ತುದಿಯಲ್ಲಿ
ಅರಳಿರುವ ಹೂಗಳಲ್ಲಿ ಅನುರಣಿಸಲಿ ರಾಮ ನಾಮ ಶ್ರೀರಾಮ ಜಯ ರಾಮ
ಜಯ ಜಯ ರಾಮ
ಬೆಟ್ಟಬಯಲ ಗಾಳಿಯಲ್ಲಿ
ನದಿಯ ಕಲಕಲದಲ್ಲಿ
ಎಳೆ ಬಿಸಿಲ ತಂಪಿನಲ್ಲಿ ತಂಗಾಳಿಯ ಇಂಪಿನಲ್ಲಿ
ತೇಲಿ ಬರಲಿ ರಾಮ ನಾಮ
ಶ್ರೀರಾಮ ಜಯ ರಾಮ
ಜಯ ಜಯ ರಾಮ
ನೀಲಾಂಬರದಂಚಿನಲ್ಲಿ
ನಗುವ ಚಂದ್ರನ ತಂಪಿನಲ್ಲಿ
ಸಾಗರದ ಅಲೆಗಳಲ್ಲಿ
ಹೂ ಮನದ ಮನುಜರಲ್ಲಿ
ಹೂ ಮುಡಿದ ಮಾನಿನಿಯರಲ್ಲಿ ಹೂವಂತೆ ಬಿರಿದು ಬರಲಿ ರಾಮ ನಾಮ
ಶ್ರೀ ರಾಮ ಜಯ ರಾಮ
ಜಯ ಜಯ ರಾಮ
ಕಿಲಕಿಲ ನಗುವ ಕಂದನ ನಗುವಲಿ
ಜುಳು ಜುಳುಹರಿಯುವ ನೀರಿನಅಲೆಯಲ್ಲಿ
ದೀನರ ಧನಿಕರ ಮನೆ ಮನೆಗಳಲ್ಲಿ
ಮೊಳಗಲಿ ಸತತಾ ಶ್ರೀ ರಾಮನಾಮ
ಶ್ರೀರಾಮ ಜಯರಾಮ.






















































