
ನಿಟ್ಟೆ : ಶ್ರೀ ರಾಜರಾಜೇಶ್ವರಿ ಕ್ಷೇತ್ರ ಸದ್ಗುರು ಶ್ರೀ ನಿತ್ಯಾನಂದ ಮಂದಿರ ನೆಲ್ಲಿ ಅತ್ತೂರು ನಿಟ್ಟೆ ಶ್ರೀ ಕ್ಷೇತ್ರದ ವೈಭವದ ಬ್ರಹ್ಮಕಲಶೋತ್ಸವ ಜರುಗಿದ ನಂತರ ಪ್ರಥಮ ನವರಾತ್ರಿಯು ಉತ್ಸವವು ದಿನಾಂಕ 22-09-2025 ರಿಂದ 1-10-2025 ವರೆಗೆ ನಡೆಯಲಿದೆ.

ಪ್ರತೀದಿನ ಸಂಜೆ 7.00 ರಿಂದ ಭಜನೆ,ಶ್ರೀದೇವಿಗೆ ಮಹಾಪೂಜೆ, ತದನಂತರ ಅನ್ನಸಂತರ್ಪಣೆ ಇರುವುದು. ಹಾಗೂ ದಿನಾಂಕ 1-10-2025 ರಂದು ಚಂಡಿಕಾಯಾಗ, ಮಹಾಪೂಜೆ ಮತ್ತು ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಲಿದೆ ಎಂದು ಸುನೀಲ್ ಕೆ ಆರ್ ಆಡಳಿತ ಮೊಕ್ತೆಸರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.























































