
ಶ್ರೀ ಮಹಾಲಿಂಗೇಶ್ವರ ಯುವಕ ಮಂಡಲ (ರಿ.) ಪತ್ತೊಂಜಿಕಟ್ಟೆ, ಪೆರ್ವಾಜೆ, ಕಾರ್ಕಳ ಇದರ 2025 -2026ನೇ ಸಾಲಿನ ನೂತನ ಅಧ್ಯಕ್ಷರಾಗಿ ಪ್ರಸಾದ್ ದೇವಾಡಿಗ ಆಯ್ಕೆಯಾಗಿರುತ್ತಾರೆ.
ಸಂಘದ ಹಿರಿಯ ಸದಸ್ಯರಾದ ಶ್ರೀ ಕೆ. ಪ್ರಭಾಕರ ಬಂಗೇರ ಇವರ ಅಧ್ಯಕ್ಷತೆಯಲ್ಲಿ ದಿನಾಂಕ 29- 06- 2025 ನೇ ಆದಿತ್ಯವಾರ ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆದ ಸಂಘದ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.
ಉಪಾಧ್ಯಕ್ಷರಾಗಿ ನಿತ್ಯಾನಂದ ಭಂಡಾರಿ, ಕಾರ್ಯದರ್ಶಿ ರಘುನಾಥ ಪೂಜಾರಿ, ಜೊತೆ ಕಾರ್ಯದರ್ಶಿ ನೀಲೇಶ್ ಕೋಟ್ಯಾನ್, ಕೋಶಾಧಿಕಾರಿ ಪ್ರಸನ್ನ ರಾವ್, ಕ್ರೀಡಾ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿ ಶ್ರೀ ರಾಜೇಂದ್ರ ಸಫಲಿಗ, ಲೆಕ್ಕಪರಿಶೋಧಕರಾಗಿ ನವೀನ್ ಎಂ. ಸುವರ್ಣ ಆಯ್ಕೆಯಾದರು.
ಗೌರವ ಸಲಹೆಗಾರರಾಗಿ ಕೆ. ಪ್ರಭಾಕರ ಬಂಗೇರ, ಎಂ. ಗಣೇಶ್ ಶೆಟ್ಟಿ, ಹೆನ್ರಿ ಸಾಂತ್ ಮಯೂರ್, ಸದಾನಂದ ಪೈ, ಸದಾಶಿವ ಶೆಟ್ಟಿ ಆಯ್ಕೆಯಾದರು ಹಾಗೂ 15 ಮಂದಿ ಸದಸ್ಯರ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.