ಶ್ರೀ ಮಹಾಲಿಂಗೇಶ್ವರ ಯುವಕ ಮಂಡಲ(ರಿ.), ಪತ್ತೊಂಜಿಕಟ್ಟೆ ಪೆವಾ೯ಜೆ ಇದರ ಇತ್ತೀಚೆಗೆ ನಡೆದ ವಾಷಿ೯ಕ ಮಹಾಸಭೆಯಲ್ಲಿ 2024-25ನೇ ಸಾಲಿನ ನೂತನ ಅಧ್ಯಕ್ಷರಾಗಿ ಶ್ರೀ ದಿನೇಶ್ ಕೊರಳಕೋಡಿ ಇವರು ಸತತ ಎರಡನೇ ಬಾರಿಗೆ ಸವಾ೯ನುಮತದಿಂದ ಆಯ್ಕೆಯಾಗಿದ್ದಾರೆ. ದಿನಾಂಕ 30-06-2024ನೇ ಆದಿತ್ಯವಾರ ನಡೆದ ಶ್ರೀ ಮಹಾಲಿಂಗೇಶ್ವರ ಯುವಕ ಮಂಡಲ(ರಿ.)ಹಾಗೂ ಮಹಿಳಾ ಮಂಡಲ(ರಿ.) ದ 2023-24ನೇ ಸಾಲಿನ ಜಂಟಿ ಮಹಾಸಭೆಯ ಅಧ್ಯಕ್ಷತೆಯನ್ನು ಸಂಘದ ಸದಸ್ಯರಾದ ಶ್ರೀ ಸುಭಾಷ್ ಸುವರ್ಣ ಇವರು ವಹಿಸಿದ್ದರು. ಶ್ರೀ ದಿನೇಶ್ ಕೊರಳಕೋಡಿ ಇವರು ಈ ಹಿಂದೆ ಸಂಘದ ಅಧ್ಯಕ್ಷರಾಗಿ ಹಾಗೂ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ ಅನುಭವವನ್ನು ಹೊಂದಿದ್ದಾರೆ. ಉಪಾಧ್ಯಕ್ಷರಾಗಿ ಶ್ರೀ ಪ್ರಸನ್ನ ರಾವ್, ಕಾಯ೯ದಶಿ೯ ಶ್ರೀ ಸುಭಾಷ್ ಸುವರ್ಣ,ಜತೆ ಕಾಯ೯ದಶಿ೯ ಶ್ರೀ ರಾಜೇಂದ್ರ ಸಫಲಿಗ, ಕೋಶಾಧಿಕಾರಿ ಶ್ರೀ ನವೀನ್ ಎಂ. ಸುವರ್ಣ, ಕ್ರೀಡಾ ಕಾಯ೯ದಶಿ೯ ಶ್ರೀ ಸುಕೇಶ್ ಸುವರ್ಣ, ಸಾಂಸ್ಕೃತಿಕ ಕಾಯ೯ದಶಿ೯ಗಳಾಗಿ ಶ್ರೀ ನಿಲೇಶ್ ಕೋಟ್ಯಾನ್, ಶ್ರೀ ಸುಭಾಷ್ ಸುವರ್ಣ, ಲೆಕ್ಕಪರಿಶೋಧಕರಾಗಿ ಶ್ರೀ ನಿತ್ಯಾನಂದ ಭಂಡಾರಿ ಇವರು ಆಯ್ಕೆಯಾಗಿದ್ದಾರೆ.
ಗೌರವ ಸಲಹೆಗಾರರಾಗಿ ಶ್ರೀ ಹೆನ್ರಿ ಸಾಂತ್ ಮಯೋರ್, ಶ್ರೀ ಸದಾನಂದ ಗುತ್ತಬೈಲ್, ಶ್ರೀ ನಜೀರ್ ಅಹಮ್ಮದ್, ಶ್ರೀ ಅಬ್ದುಲ್ ಕರೀಂ ಇವರನ್ನು ಆರಿಸಲಾಯಿತು. 15ಮಂದಿ ಸದಸ್ಯರನ್ನೊಳಗೊಂಡ ಕಾಯ೯ಕಾರಿ ಸಮಿತಿಯನ್ನು ರಚಿಸಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ