ಶ್ರೀ ಮಹಾಲಿಂಗೇಶ್ವರ ಮಹಿಳಾ ಮಂಡಲ(ರಿ.), ಪತ್ತೊಂಜಿಕಟ್ಟೆ, ಪೆರ್ವಾಜೆ ಇದರ ಇತ್ತೀಚೆಗೆ ನಡೆದ ವಾರ್ಷಿಕ ಮಹಾಸಭೆಯಲ್ಲಿ 2024-25ನೇ ಸಾಲಿನ ನೂತನ ಅಧ್ಯಕ್ಷರಾಗಿ ಶ್ರೀಮತಿ ವೀಣಾ ರಾಜೇಶ್ ಭಂಡಾರಿ ಇವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ದಿನಾಂಕ 30-06-2024 ನೇ ಆದಿತ್ಯವಾರ ನಡೆದ ಶ್ರೀ ಮಹಾಲಿಂಗೇಶ್ವರ ಯುವಕ ಮಂಡಲ(ರಿ.) ಹಾಗೂ ಮಹಿಳಾ ಮಂಡಲ(ರಿ)ದ 2023-2024 ನೇ ಸಾಲಿನ ಜಂಟಿ ಮಹಾಸಭೆಯ ಅಧ್ಯಕ್ಷತೆಯನ್ನು ಸಂಘದ ಸದಸ್ಯರಾದ ಶ್ರೀ ಸುಭಾಸ್ ಸುವರ್ಣ ಇವರು ವಹಿಸಿದ್ದರು. ಮಹಿಳಾ ಮಂಡಲದ ಉಪಾಧ್ಯಕ್ಷರಾಗಿ ಸುಜಯಾ ಮೋಹನ್, ಕಾರ್ಯದರ್ಶಿಯಾಗಿ ಮಮತಾ ಸುವರ್ಣ, ಜತೆಕಾರ್ಯದರ್ಶಿಯಾಗಿ ರೂಪಾ ಶೆಟ್ಟಿ, ಕೋಶಾಧಿಕಾರಿಯಾಗಿ ಶುಭಲಕ್ಷ್ಮೀ ಬಂಗೇರ, ಸಾಂಸ್ಕೃತಿಕ ಕಾರ್ಯದರ್ಶಿ ಅಮಿತಾ ಸಾಲಿಯಾನ್, ಕ್ರೀಡಾ ಕಾರ್ಯದರ್ಶಿ ಶುಭಾ ಕಿಶೋರ್ ಆಯ್ಕೆಯಾದರು. 20 ಮಂದಿ ಸದಸ್ಯರನ್ನೊಳಗೊಂಡ ಕಾರ್ಯಕಾರಿ ಸಮಿತಿಯನ್ನು ರಚಿಸಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ