ಕಬ್ಸ್ ಮತ್ತು ಬುಲ್ಬುಲ್ ವತಿಯಿಂದ ನಡೆದ ಸಮುದಾಯ ಸೇವಾ ಕಾರ್ಯಕ್ರಮ
ಚೇತನ ವಿಶೇಷ ಶಾಲೆಗೆ ಭೇಟಿ,

ಕಾರ್ಕಳ,ಡಿ.5: ಶ್ರೀ ಭುವನೇಂದ್ರ ರೆಸಿಡೆನ್ಶಿಯಲ್ ಸ್ಕೂಲ್ ಕಾರ್ಕಳ ಇಲ್ಲಿನ ಕಬ್ಸ್ ಮತ್ತು ಬುಲ್ಬುಲ್ ವತಿಯಿಂದ ನಡೆದ ಸಮುದಾಯ ಸೇವಾ ಕಾರ್ಯಕ್ರಮದ ಭಾಗವಾಗಿ ಕಾರ್ಕಳ ಪುರಸಭಾ ವ್ಯಾಪ್ತಿಯ ಚೇತನಾ ವಿಶೇಷ ಶಾಲೆಗೆ ನಮ್ಮ ಸಂಸ್ಥೆಯ ಕಬ್ಸ್ ಮತ್ತು ಬುಲ್ಬುಲ್ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಭೇಟಿ ನೀಡಿದರು.
ಚೇತನಾ ವಿಶೇಷ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಹೇಮಲತಾ ಅವರು ಸಂಸ್ಥೆಯ ಕುರಿತು ವಿವರಿಸಿದರು. ವಿದ್ಯಾರ್ಥಿಗಳಿಂದ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಶಾಲೆಯ ವತಿಯಿಂದ ಸಂಸ್ಥೆಗೆ ಧನಸಹಾಯ ಹಾಗೂ ಹಣ್ಣುಹಂಪಲುಗಳನ್ನು ಕೊಡುಗೆಯಾಗಿ ನೀಡಲಾಯಿತು. ಶಾಲೆಯ ಕಬ್ಸ್ ಶಿಕ್ಷಕಿ ಪೂಜಾ , ಮಹಾಲಕ್ಷ್ಮೀ, ಮತ್ತು ಬುಲ್ಬುಲ್ ಶಿಕ್ಷಕರಾದ ಸ್ಮಿತಾ ಹಾಗೂ ಶ್ವೇತ ಉಪಸ್ಥಿತರಿದ್ದರು.





