32.6 C
Udupi
Thursday, November 21, 2024
spot_img
spot_img
HomeBlogಶ್ರೀ ಭುವನೇಂದ್ರ ರೆಸಿಡೆನ್ಸಿಯಲ್ ಶಾಲೆಯಲ್ಲಿ ಎರಡು ದಿನಗಳ ವಾರ್ಷಿಕ ಕ್ರೀಡಾಕೂಟ

ಶ್ರೀ ಭುವನೇಂದ್ರ ರೆಸಿಡೆನ್ಸಿಯಲ್ ಶಾಲೆಯಲ್ಲಿ ಎರಡು ದಿನಗಳ ವಾರ್ಷಿಕ ಕ್ರೀಡಾಕೂಟ

ಕ್ರೀಡೆಯು  ಜೀವನದ ಅವಿಭಾಜ್ಯ ಅಂಗ. ನಾವೆಲ್ಲರೂ ಕ್ರೀಡಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಸೋಲು ಗೆಲುವನ್ನು ಬದಿಗಿಟ್ಟು ವೇಳೆಯಲ್ಲಿ ಭಾಗವಹಿಸುವುದು ನಮ್ಮ ಮೊದಲ ಪ್ರಾಶಸ್ತ್ಯವಾಗಿರಬೇಕು. ಕ್ರೀಡಾ ಮನೋಭಾವವುಳ್ಳವನು ಜೀವನದಲ್ಲಿ ಎಂದು ಸೋಲುವುದಿಲ್ಲ. ಆತ ಸೋಲನ್ನು ಸವಾಲನಾಗಿ ಸ್ವೀಕರಿಸುತ್ತಾನೆ. ಎಂದು ವೃತ್ತಿಪರ ಮೋಟಾರ್ ಸೈಕಲ್ ರೇಸರ್ ಆದಂತಹ ಕುಮಾರಿ ಅರ್ಪಿತಾ ವಿ ಎಂ ಇವರು ಹೇಳಿದರು.

ಶ್ರೀ ಭುವನೇಂದ್ರ ರೆಸಿಡೆನ್ಶಿಯಲ್ ಸ್ಕೂಲ್ ಕಾರ್ಕಳ ಇಲ್ಲಿ ನಡೆದಂತಹ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು. ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ರಾಧಾ ನಾಯಕ್ ಸರಕಾರಿ ಪ್ರೌಢಶಾಲೆ ಎಣ್ಣೆಹೊಳೆ ಇಲ್ಲಿನ ದೈಹಿಕ ಶಿಕ್ಷಣ ಶಿಕ್ಷಕರಾದ ರಾಜಾರಾಮ್ ಶೆಟ್ಟಿ ಇವರು ಮಾತನಾಡಿ, ಕ್ರೀಡಾ ಮನೋಭಾವವುಳ್ಳವರು ಎಂದಿಗೂ ಜೀವನದಲ್ಲಿ ಸೋಲುವುದಿಲ್ಲ. ಅವರು ಸೋಲನ್ನು ಕೂಡ ಸವಾಲನ್ನಾಗಿ ಸ್ವೀಕರಿಸುವ ಮೂಲಕ ಜೀವನದಲ್ಲಿ ಎದುರಾಗಿರುವ ಎಲ್ಲಾ ಸಂಕಷ್ಟಗಳಿಗೂ ಕೂಡ ಪರಿಹಾರವನ್ನು ಕಂಡುಕೊಳ್ಳುತ್ತಾರೆ. ಎಂದು ಹೇಳಿದರು.

ಸಂಸ್ಥೆಯ ಸಂಚಾಲಕರಾದ ಕೆ ವೆಂಕಟೇಶ ಪ್ರಭು ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಪ್ರಾಂಶುಪಾಲರಾದ ಪ್ರಮೀಳಾ ಕೋಟ್ಯಾನ್  ಇವರು ಸ್ವಾಗತಿಸಿದರು. ಶಾಲಾ ಕ್ರೀಡಾ ನಾಯಕನಾದ ಯುವನ್ ಇವರು ಕ್ರೀಡಾ ಪ್ರತಿಜ್ಞೆಯನ್ನು ಬೋಧಿಸಿದರು. ವಿದ್ಯಾರ್ಥಿಗಳಾದ ತನಯ್ ಹಾಗೂ ಅಭಿಜ್ಞಾ ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಅದ್ವೈತ್  ಜೈನ್  ಹಾಗೂ ಅದ್ವೈತ್ ತಂತ್ರಿ ಇವರು ಧನ್ಯವಾದವಿತ್ತರು. ದೈಹಿಕ ಶಿಕ್ಷಣ ಶಿಕ್ಷಕರುಗಳಾದ ನಿಶಾಂತ್ ಅಂಚನ್ ಹಾಗೂ ಪೂಜಾ ಇವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು. 

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page