ಕ್ರೀಡೆಯು ನಮ್ಮ ಜೀವನದಲ್ಲಿ ಶಿಸ್ತಿನ ಪಾಠ ಕಲಿಸುತ್ತದೆ: ಸೋನಿತ್ ಮೆಂಡನ್

ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ಎನ್ನುವುದು ಬಹಳ ಮುಖ್ಯ. ಶಿಸ್ತಿನಿಂದ ಶ್ರಮಿಸಿದರೆ ಮಾತ್ರ ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಸಾಧ್ಯ. ಕ್ರೀಡೆಯು ನಮ್ಮ ಜೀವನದಲ್ಲಿ ಶಿಸ್ತಿನ ಪಾಠವನ್ನು ಕಲಿಸುತ್ತದೆ. ಹೀಗಾಗಿ ವಿದ್ಯಾರ್ಥಿ ಜೀವನದಲ್ಲಿ ಕ್ರೀಡೆ ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಎಂದು ಅಥ್ಲೆಟಿಕ್ ಫೆಡರೇಶನ್ ಆಫ್ ಇಂಡಿಯಾದ ಫಿಟ್ನೆಸ್ ಸಲಹೆಗಾರ ಹಾಗೂ ತರಬೇತುದಾರರಾದ ಸೋನಿತ್ ಮೆಂಡನ್ ಅವರು ಹೇಳಿದರು.

ಇವರು ದಿನಾಂಕ 24.10.2025ರಂದು ಶ್ರೀ ಭುವನೇಂದ್ರ ರೆಸಿಡೆನ್ಶಿಯಲ್ ಸ್ಕೂಲ್ ಕಾರ್ಕಳ ಇಲ್ಲಿನ ಬೆಳ್ಳಿ ಹಬ್ಬದ ಸಂದರ್ಭದಲ್ಲಿ ನಡೆದ 25ನೇ ವರ್ಷದ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ದಿನಾಂಕ 25.10.2025 ರಂದು ನಡೆದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಆಗಮಿಸಿದಂತಹ ಸಂಸ್ಥೆಯ ಪೂರ್ವ ವಿದ್ಯಾರ್ಥಿ ಹಾಗೂ ಪ್ರಸ್ತುತ ಎಸ್ ಕೆ ಎಫ್ ಎಲಿಕ್ಸರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಬನ್ನಡ್ಕ ಮೂಡುಬಿದಿರಿ ಇದರ ನಿರ್ದೇಶಕರಾದಂತಹ, ಶ್ರೀಯುತ ಪ್ರಜ್ವಲ್ ಆಚಾರ್ ಇವರು ಮಾತನಾಡಿ ತಮ್ಮ ಶಾಲಾ ದಿನಗಳ ಅನುಭವವನ್ನು ಹಂಚಿಕೊಂಡರು. ಜೊತೆಗೆ ವಿದ್ಯಾರ್ಥಿಗಳಿಗೆ ಕ್ರೀಡಾಮನೋಭಾವನೆ ಮತ್ತು ಶ್ರದ್ಧೆಯಿಂದ ಮುಂದುವರಿಯುವಂತೆ ಪ್ರೇರಣೆ ನೀಡಿದರು.

ಸಂಸ್ಥೆಯ ಸಂಚಾಲಕರಾದಂತಹ ಶ್ರೀಯುತ ಕೆ ವೆಂಕಟೇಶ ಪ್ರಭು ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಪ್ರಾಂಶುಪಾಲರಾದಂತಹ ಶ್ರೀಮತಿ ವೀಣಾ ಶೆಣೈ ಇವರು ಸ್ವಾಗತಿಸಿದರು. ಶಾಲಾ ಕ್ರೀಡಾ ನಾಯಕನಾದ ಭುವನ್ ಮಾಲಾಜಿ ಇವರು ಕ್ರೀಡಾ ಪ್ರತಿಜ್ಞೆಯನ್ನು ಬೋಧಿಸಿದರು. ವಿದ್ಯಾರ್ಥಿಗಳಾದ ವರುಣ್ ಹಾಗೂ ಪ್ರೇರಣಾ ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ರೋಹನ್ ಸುಚೇತ್ ಹಾಗೂ ವಿಖ್ಯಾತ್ ಶೆಟ್ಟಿ ಇವರು ಧನ್ಯವಾದವಿತ್ತರು.
ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕರಾದಂತಹ ನಿಶಾಂತ್ ಅಂಚನ್ ಹಾಗೂ ಶ್ರೀಮತಿ ಪೂಜಾ ಇವರ ಮಾರ್ಗದರ್ಶನದಲ್ಲಿ ನಡೆದಂತಹ ಕ್ರೀಡಾಕೂಟದಲ್ಲಿ ಶಿಕ್ಷಕರು ವಿದ್ಯಾರ್ಥಿಗಳು ಶಿಕ್ಷಕೇತರ ಬಂಧುಗಳು ಭಾಗವಹಿಸಿದ್ದರು.





















































