ದೇಶ ಸೇವೆ ಮಾಡುವುದಕ್ಕೆ ಯಾವುದೇ ಸಮವಸ್ತ್ರದ ಅವಶ್ಯಕತೆ ಇಲ್ಲ: ವಾಸುದೇವ ಶೇರಿಗಾರ್

ದೇಶದ ಬಗ್ಗೆ ಕಾಳಜಿಯನ್ನು ವಿದ್ಯಾರ್ಥಿ ಜೀವನದಲ್ಲಿಯೇ ಅಳವಡಿಸಿಕೊಳ್ಳಬೇಕು. ದೇಶ ಸೇವೆ ಮಾಡುವುದಕ್ಕೆ ಯಾವುದೇ ಸಮವಸ್ತ್ರದ ಅವಶ್ಯಕತೆ ಇಲ್ಲ. ಸಮವಸ್ತ್ರವನ್ನು ಧರಿಸದೆಯೂ ಕೂಡ ದೇಶ ಸೇವೆಯನ್ನು ಮಾಡಬಹುದು. ನಾವೆಲ್ಲರೂ ಎಳೆಯ ವಯಸ್ಸಿನಲ್ಲಿಯೇ ರಾಷ್ಟ್ರ ಅಭಿಮಾನವನ್ನು ಬೆಳೆಸಿಕೊಳ್ಳುವ ಮೂಲಕ, ದೇಶದ ಅಭಿವೃದ್ಧಿಯಲ್ಲಿ ಕೈಜೋಡಿಸೋಣ ಎಂದು ನಿವೃತ್ತ ಸುಬೇದಾರ್ ಮೇಜರ್ ವಾಸುದೇವ ಶೇರಿಗಾರ್ ಇವರು ಹೇಳಿದರು.
ಇವರು ಶ್ರೀ ಭುವನೇಂದ್ರ ರೆಸಿಡೆನ್ಶಿಯಲ್ ಸ್ಕೂಲ್ ಕಾರ್ಕಳ ಇಲ್ಲಿ ನಡೆದ 79ನೆಯ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು. ಸಂಸ್ಥೆಯ ಸಂಚಾಲಕರಾದಂತಹ ಕೆ ವೆಂಕಟೇಶ ಪ್ರಭು ಇವರು ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯನ್ನು ವಿವರಿಸಿದರು. ಸಂಸ್ಥೆಯ ಪ್ರಾಂಶುಪಾಲರಾದ ಪ್ರಮೀಳಾ ಕೋಟ್ಯಾನ್ ಇವರು ಕಾರ್ಯಕ್ರಮಕ್ಕೆ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಮಾಸ್ಟರ್ ಧನ್ವೀನ್, ಮಾಸ್ಟರ್ ಭುವನ್ ಮಲಾಜಿ ಹಾಗೂ ಕುಮಾರಿ ಅವನಿ ಪ್ರಭು ಸ್ವಾತಂತ್ರ್ಯದ ಮಹತ್ವವನ್ನು ಹಂಚಿಕೊಂಡರು. ವಿದ್ಯಾರ್ಥಿನಿ ಕುಮಾರಿ ಗಂಗಾ ಶೆಟ್ಟಿ ಇವರು ಕಾರ್ಯಕ್ರಮವನ್ನು ನಿರೂಪಿಸಿದರು, ಮಾಸ್ಟರ್ ಹರ್ಷಿತ್ ಇವರು ಧನ್ಯವಾದವಿತ್ತರು.
ಸ್ವಂತ್ರ್ಯೋತ್ಸವದ ಪ್ರಯುಕ್ತ ವಿವಿಧ ಸ್ಫರ್ಧೆಗಳು ಹಾಗೂ ದೇಶಭಕ್ತಿಯನ್ನು ಸಾರುವ ಮನರಂಜನಾ ಕಾರ್ಯಕ್ರಮಗಳು ನಡೆದವು.ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಶಿಕ್ಷಕೇತರ ಬಂಧುಗಳು ಉಪಸ್ಥಿತರಿದ್ದರು.
