30.2 C
Udupi
Friday, April 3, 2026
spot_img
spot_img
HomeBlogಶ್ರೀ ಭುವನೇಂದ್ರ ಕಾಲೇಜು ಕಾರ್ಕಳ, ವಿದ್ಯಾರ್ಥಿ ವೇತನ ವಿತರಣೆ

ಶ್ರೀ ಭುವನೇಂದ್ರ ಕಾಲೇಜು ಕಾರ್ಕಳ, ವಿದ್ಯಾರ್ಥಿ ವೇತನ ವಿತರಣೆ

spot_imgspot_img


ಕಾರ್ಕಳ: ವಿದ್ಯಾರ್ಥಿ ಜೀವನನನ್ನು ಶೃದ್ಧೆಯಿಂದ ನಿಭಾಯಿಸಬೇಕು. ಕಲಿಕೆಯಲ್ಲಿ ಪರಿಶ್ರಮ ಅಗತ್ಯ. ನಾವೆಲ್ಲರೂ ದುಡಿಮೆಯ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದರಿಂದ ಇವತ್ತು ದುಡಿಮೆಯ ಪಾಲನ್ನು ಹಂಚುವುದಕ್ಕೆ ಸಾಧ್ಯವಾಯಿತು. ಪರಿಶ್ರಮ ನಮ್ಮನ್ನು ಯಾವಾಗಲೂ ಬದುಕಿನಲ್ಲಿ ಸಾಧಿಸುವುದಕ್ಕೆ ಪ್ರೇರೇಪಿಸುತ್ತದೆ.


ಮನಸ್ಸನ್ನು ದೇವರ ಕಡೆಗಿಟ್ಟುಕೊಂಡು ಓದುವ ಪ್ರಯತ್ನ ಮಾಡಬೇಕು. ಆಗ ಆತ್ಮಸಂತೋಷ ನಿಮ್ಮದಾಗುತ್ತದೆ. ಭುವನೇಂದ್ರ ಕಾಲೇಜು ನಮ್ಮನ್ನೆಲ್ಲ ಆಧ್ಯಾತ್ಮಿಕ ಹಾಗೂ ನೈತಿಕ ಪ್ರೇರಣೆ ನೀಡಿ ಇಲ್ಲಿಂದ ಕಳಿಸಿದೆ. ಇಲ್ಲಿ ಕಲಿತ ವಿಚಾರಗಳನ್ನು ನಾವು ನಮ್ಮ ಬದುಕಿಗೆ ಅಳವಡಿಸಿಕೊಂಡಿದ್ದೇವೆ. ನೀವು ಕೂಡಾ ಅದೇ ದಾರಿಯಲ್ಲಿ ಸಾಗುವ ಪ್ರಯತ್ನವನ್ನು ಮಾಡಿದರೆ ಯಶಸ್ಸು ನಿಮಗೆ ಕಟ್ಟಿಟ್ಟ ಬುತ್ತಿ ಎಂದು ಸಿ.ಎ. ಕೆ.ಕಮಲಾಕ್ಷ ಕಾಮತ್ ಹೇಳಿದರು.
ಅವರು ಶ್ರೀ ಭುವನೇಂದ್ರ ಕಾಲೇಜು, ಕಾರ್ಕಳ ಇಲ್ಲಿನ ವಿದ್ಯಾರ್ಥಿಗಳಿಗೆ ವಿವಿಧ ವಿದ್ಯಾರ್ಥಿ ವೇತನವನ್ನು ವಿತರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ 2024-25ನೇ ಸಾಲಿನ ಕಾರ್ಕಳ ವಕೀಲ ವಾಸುದೇವ ಕಾಮತ್ ಸ್ಮರಣಾರ್ಥ, ಡಾ. ಟಿ.ಎಂ.ಎ.ಪೈ ಮೆರಿಟ್, ಸಿ.ಎ.ಶಿವಾನಂದ ಪೈ, ಸತೀಶ್ ಪೈ ಹಾಗೂ 1979ರ ಸಾಲಿನ ಹಳೆ ವಿದ್ಯಾರ್ಥಿಗಳು ಕೊಡ ಮಾಡುವ ಮೆರಿಟ್ ಹಾಗೂ ಬಡ ವಿದ್ಯಾರ್ಥಿಗಳಿಗೆ ಸಂಬಂಧಪಟ್ಟ ಸುಮಾರು ಹತ್ತು ಲಕ್ಷ ರೂಪಾಯಿ ಮೊತ್ತ ದ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.
ವಿಶ್ವಸ್ಥ ಮಂಡಳಿಯ ಸದಸ್ಯರಾದ ಶ್ರೀ ಟಿ.ಜಗದೀಶ್, ಆಡಳಿತ ಮಂಡಳಿಯ ಸದಸ್ಯರಾದ ಎರ್ಮಾಳ್ ಮೋಹನ ಶೆಣೈ ವಿತರಣೆಗೈದರು.
ಕಾಲೇಜಿನ ಪ್ರಾಚಾರ್ಯರಾದ ಡಾ. ಮಂಜುನಾಥ ಕೋಟ್ಯಾನ್ ಸ್ವಾಗತಿಸಿ, ಐಕ್ಯೂಎಸಿ ನಿರ್ದೇಶಕರಾದ ಹೆಚ್ .ಜಿ. ನಾಗಭೂಷಣ ವಂದಿಸಿದರು.ಸುಲೋಚನಾ ಪಚ್ಚಿನಡ್ಕ ಕಾರ್ಯಕ್ರಮ ನಿರೂಪಿಸಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page