
ಕಾಸರಗೋಡು ಜಿಲ್ಲೆ ಮಂಜೇಶ್ವರ ತಾಲೂಕಿನ ಬಡಾಜೆ ಗ್ರಾಮದ ಅರಿಬೈಲು ಕೆದುಮೂಲೆ ಶ್ರೀ ಧೂಮಾವತಿ ಮತ್ತು ಕಲ್ಲಲ್ದ ಗುಳಿಗ ದೈವದ ಕ್ಷೇತ್ರದಲ್ಲಿ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ಶ್ರೀ ದೈವಗಳ ನೇಮೋತ್ಸವ ಇದೇ ಬರುವ ತಾರೀಕು 19.4.2026ಆದಿತ್ಯವಾರದಿಂದ 21.4.2026 ಮಂಗಳವಾರದ ವರೆಗೆ ವೈದಿಕ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರಗಲಿದೆ.
19.4.2026 ಆದಿತ್ಯವಾರ ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನ ಕಡಂಬಾರಿನಿಂದ ಹೊರೆ ಕಾಣಿಕೆಯ ಮೆರವಣಿಗೆ ಹೊರಟು ಶ್ರೀ ಕ್ಷೇತ್ರಕ್ಕೆ ತಲುಪಲಿದೆ.20.4.2026 ಸೋಮವಾರ 10ರಿಂದ 10.32ರ ಒಳಗೆ ನಡೆಯುವ ಮಿಥುನ ಲಗ್ನ ಶುಭ ಮುಹೂರ್ತದಲ್ಲಿ ಶ್ರೀ ದೈವಗಳ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆಯಲಿದೆ.ಮಧ್ಯಾಹ್ನ 12ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ.ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ 7.30ರಿಂದ ನೃತ್ಯ ವೈವಿಧ್ಯ ಮತ್ತು 8.30ಕ್ಕೆ ಕಲಾಸಂಗಮ ಕುಡ್ಲ ಇವರಿಂದ ಶಿವದೂತೆ ಗುಳಿಗೆ ನಾಟಕ ಪ್ರದರ್ಶನಗೊಳ್ಳಲಿದೆ.21.4.2026ರಂದು ಬೆಳಿಗ್ಗೆ 9ರಿಂದ ಶ್ರೀ ದೈವಗಳಿಗೆ ನೇಮೋತ್ಸವ ನಡೆಯಲಿದೆ.ಈ ಎಲ್ಲಾ ಕಾರ್ಯಕ್ರಮಕ್ಕೆ ಭಕ್ತಾಭಿಮಾನಿಗಳು ಬಂದು ತನುಮನ ಧನಗಳಿಂದ ಸಹಕರಿಸಿ ಶ್ರೀ ದೈವಗಳ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸಲಾಗಿದೆ.








