79ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ,

ಶ್ರೀ ದುರ್ಗಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಕುಕ್ಕುಂದೂರು. ಇಲ್ಲಿ ಇಂದು 79ನೇ ಸ್ವತಂತ್ರೋತ್ಸವದ ಅಂಗವಾಗಿ ಶಾಲಾ ಹಳೆ ವಿದ್ಯಾರ್ಥಿ, ಅಧ್ಯಕ್ಷರು , ರೋಟರಿ ರಾಕ್ ಸಿಟಿ ಮತ್ತು ರಾಜಪುರಿ ಸಾರಸ್ವತ ಬ್ಯಾಂಕಿನ ಸದಸ್ಯರಾದ ಶ್ರೀಯುತ ಸುರೇಂದ್ರ ನಾಯಕ್ ರವರು ಧ್ವಜಾರೋಹಣ ಕಾರ್ಯಕ್ರಮ ನಡೆಸಿಕೊಟ್ಟರು.

ನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ವಿದ್ಯುತ್ ಶಕ್ತಿ ಮಂಡಳಿ ಕಾರ್ಕಳJ.E ಉಪೇಂದ್ರ ವಾಗ್ಳೆ, ಸಂಚಾಲಕರಾದ ರಾಧಾಕೃಷ್ಣ ಶೆಟ್ಟಿ, ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ವೃಷಭ ರಾಜ ಕಡಂಬ, ಶಾಲಾ ವಿದ್ಯಾರ್ಥಿ JCI ಇದರ ನಿಕಟ ಪೂರ್ವ ಅಧ್ಯಕ್ಷರಾದ ಪ್ರಚಿತ್, ನಮ್ಮ ಶಾಲಾ ಮುಖ್ಯ ಶಿಕ್ಷಕರಾದ ಜಗದೀಶ್ ಹೆಗ್ಡೆ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹಾಗೆಯೇ ಹೆಚ್ಚಿನ ಸಂಖ್ಯೆಯಲ್ಲಿ ಹಳೆ ವಿದ್ಯಾರ್ಥಿಗಳು, ಪೋಷಕರು ಅಂಗನವಾಡಿ ಸಿಬ್ಬಂದಿಗಳು ಹಾಗೂ ನಿವೃತ್ತ ಮುಖ್ಯ ಶಿಕ್ಷಕರಾದ ದೇವದಾಸ್ ಹೆಗ್ಡೆಯವರು ಉಪಸ್ಥಿತರಿದ್ದರು. ಬಂದಂತಹ ಎಲ್ಲರನ್ನೂ ಮುಖ್ಯ ಶಿಕ್ಷಕರಾದ ಜಗದೀಶ್ ಹೆಗ್ಡೆಯವರು ಆದರ ಪೂರ್ವಕವಾಗಿ ಸ್ವಾಗತಿಸಿದರು. ವಿಜೇತ ಮಕ್ಕಳು ಭಾಷಣ ಮಾಡಿ, ದೇಶಭಕ್ತಿ ಗೀತೆಯನ್ನು ಹಾಡಿದರು. ವಿಜೇತ ಮಕ್ಕಳ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಸಹ ಶಿಕ್ಷಕಿ ಶ್ರೀಮತಿ ಅನಿತಾ ರವರು ನಡೆಸಿಕೊಟ್ಟರು. ಶಾಲಾ ಹಳೆ ವಿದ್ಯಾರ್ಥಿಗಳಾದ ಪ್ರಚಿತ್, ಇಶಾನ್, ಪ್ರಕಾಶ್ ಪ್ರಭು, ಝೀನತ್ ಹಾಗೂ ಸಹಪಾಠಿಗಳು (solider 2000 ಸಾಲಿನಲ್ಲಿ ಕಲಿತ ಹಳೆ ವಿದ್ಯಾರ್ಥಿಗಳು) ನಮ್ಮ ಮಕ್ಕಳಿಗೆ ಕ್ರೀಡಾ ಸಾಮಗ್ರಿಗಳನ್ನು ಮುಖ್ಯ ಶಿಕ್ಷಕರು ಮತ್ತು ದೈಹಿಕ ಶಿಕ್ಷಕರಿಗೆ ಹಸ್ತಾಂತರಿಸಿದರು. ಇವರಿಗೆ ಮುಖ್ಯ ಶಿಕ್ಷಕರು ಪದಕವನ್ನು ನೀಡಿ ಗೌರವಿಸಿದರು. ಮಕ್ಕಳಿಂದ ಬ್ಯಾಂಡ್ ಸೆಟ್ ಪ್ರದರ್ಶನ ವಿತ್ತು .ಶ್ರೀಯುತರಾದ ಉಪೇಂದ್ರ ವಾಗ್ಳೆ , ಸುರೇಂದ್ರ ನಾಯಕ್ ಮತ್ತು ಪ್ರಚಿತ್ ರವರು ಸಭೆಯನ್ನುದ್ದೇಶಿಸಿ ಮಾತನಾಡಿದರು. ಬೆಳಗಿನ ಉಪಹಾರದ ವ್ಯವಸ್ಥೆಯನ್ನು ನಮ್ಮ ಶಾಲೆಯಲ್ಲಿ ಯೋಗ ಕ್ಲಾಸ್ ನಡೆಸುವ ಶ್ರೀಮತಿ ಲಕ್ಷ್ಮೀ ಮತ್ತು ಯೋಗ ಬಳಗ ಹಾಗೂ ಸಿಹಿ ತಿಂಡಿ ವ್ಯವಸ್ಥೆಯನ್ನು ಗ್ರಾಮ ಪಂಚಾಯತ್ ಕುಕ್ಕುಂದೂರು. ನಿವೃತ್ತ ಶಿಕ್ಷಕಿ ಯಮುನಾ L, ಪ್ರಚಿತ್ ಮತ್ತು ಸಹಪಾಠಿಗಳು ಮಾಡಿದರು . ಮುಖ್ಯ ಶಿಕ್ಷಕರಾದ ಜಗದೀಶ್ ಹೆಗ್ಡೆಯವರು ಬಹುಮಾನದ ಪ್ರಾಯೋಜಕರಾಗಿದ್ದರು. ಕೊನೆಯದಾಗಿ ಶ್ರೀಮತಿ ವಿದ್ಯಾರವರು ಧನ್ಯವಾದ ಕಾರ್ಯಕ್ರಮ ನಡೆಸಿಕೊಟ್ಟರು. ಸಹ ಶಿಕ್ಷಕರಾದ ಉಮೇಶ್ ರವರು ಕಾರ್ಯಕ್ರಮ ಸಂಯೋಜನೆಗೈದರು.