32.4 C
Udupi
Friday, April 3, 2026
spot_img
spot_img
HomeBlogಶ್ರೀ ದುರ್ಗಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಕುಕ್ಕುಂದೂರು

ಶ್ರೀ ದುರ್ಗಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಕುಕ್ಕುಂದೂರು

spot_imgspot_img

2024 – 25ನೇ ಸಾಲಿನ ಕಡೆ ಭಜನೆ

ಶ್ರೀ ದುರ್ಗಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಕುಕ್ಕುಂದೂರು ಇಲ್ಲಿ ಇಂದು 2024ನೇ 25ನೇ ಸಾಲಿನ ಕಡೆ ಭಜನೆ ದಿನಾಂಕ 28.03.25 ರ ಶುಕ್ರವಾರದಂದು ಪೂರ್ವಾಹ್ನ ನಡೆಯಿತು. ಆಗಮಿಸಿದ ಅತಿಥಿಗಳನ್ನು ಶಾಲಾ ಮುಖ್ಯ ಶಿಕ್ಷಕರಾದ ಶ್ರೀಯುತ ಜಗದೀಶ್ ಹೆಗ್ಡೆಯವರು ಸ್ವಾಗತಿಸಿದರು.

ನಂತರ ಕಮಲಾಕ್ಷ ಕಾಮತ್ ರವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ವೃಷಭ ರಾಜ ಕಡಂಬ ನಿವೃತ್ತ ಶಿಕ್ಷಕರಾದ ಲೂಕಾಸ್ ಸರ್, ಶ್ರೀಮತಿ ಸೀಮಾ ಕಾಮತ್, ಹಳೆ ವಿದ್ಯಾರ್ಥಿಗಳಾದ ಸುರೇಂದ್ರ ನಾಯಕ್ ಹಾಗು ಶ್ರೀಮತಿ ಪದ್ಮಾವತಿ ಉಪಸ್ಥಿತರಿದ್ದರು. ವಿನಾಯಕನ ಪ್ರಾರ್ಥನೆಯೊಂದಿಗೆ ಕಮಲಾಕ್ಷ ಕಾಮತ್ ರವರು ಭಜನೆಯನ್ನು ಪ್ರಾರಂಭಿಸಿದರು ನಂತರ ವಿದ್ಯಾರ್ಥಿಗಳಿಂದ ಕುಣಿತ ಭಜನೆ ನಡೆಯಿತು. ನಂತರ ಮಹಾಮಂಗಳಾರತಿಯೊಂದಿಗೆ ಭಜನಾ ಕಾರ್ಯಕ್ರಮವನ್ನು ಸಮಾಪ್ತಿಗೊಳಿಸಲಾಯಿತು. ಪ್ರಸಾದ ವಿತರಿಸಲಾಯಿತು. ಕಮಲಾಕ್ಷ ಕಾಮತ್ ರವರು ಮಕ್ಕಳಿಗೆ ಚಾಕಲೇಟ್ ಮತ್ತು ಲಡ್ಡಿನ ವ್ಯವಸ್ಥೆ ಮಾಡಿದರು . ಮಕ್ಕಳಿಗೆ ಪಾಯಸದ ಊಟವನ್ನು ಶ್ರೀಯುತ ಜಗದೀಶ್ ಹೆಗ್ಡೆಯವರು ವ್ಯವಸ್ಥೆ ಮಾಡಿದರು . ಈ ಕಾರ್ಯಕ್ರಮದಲ್ಲಿ ಶಾಲಾ ಅಭಿವೃದ್ಧಿ ಸಮಿತಿಯ ಕಾರ್ಯದರ್ಶಿಯಾದ ಬಾಲಕೃಷ್ಣ ಶೆಟ್ಟಿ, ದೇವದಾಸ್ ಶೆಟ್ಟಿ, ಸತೀಶ್ ಶೆಟ್ಟಿ, ಹರೀಶ್ ಶೆಟ್ಟಿ ಕಸ್ತೂರಿ ಕಾರಂತ್, ಹರ್ಷಿಣಿ ವಿಜಯ ರಾಜ್ ಎಲ್ಲರೂ ಉಪಸ್ಥಿತರಿದ್ದರು ಹಾಗೂ ಹಳೆ ವಿದ್ಯಾರ್ಥಿಗಳು, ಶಾಲಾ ಶಿಕ್ಷಕ ವೃಂದ ದವರು ಉಪಸ್ಥಿತರಿದ್ದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page