26.8 C
Udupi
Monday, April 13, 2026
spot_img
spot_img
HomeBlogಶ್ರೀ ಗುರುಕುಲ ಅ, ಹಿ, ಪ್ರಾ ಶಾಲೆ ಮಾಳ ಮಲ್ಲಾರು:ವಿಜ್ಞಾನ ಮಾದರಿ ಸ್ಪರ್ಧೆ ಕಾರ್ಯಕ್ರಮ

ಶ್ರೀ ಗುರುಕುಲ ಅ, ಹಿ, ಪ್ರಾ ಶಾಲೆ ಮಾಳ ಮಲ್ಲಾರು:ವಿಜ್ಞಾನ ಮಾದರಿ ಸ್ಪರ್ಧೆ ಕಾರ್ಯಕ್ರಮ

ಶ್ರೀ ಗುರುಕುಲ ಅ, ಹಿ, ಪ್ರಾ ಶಾಲೆ ಮಾಳ ಮಲ್ಲಾರು ಇಲ್ಲಿ ದಿನಾಂಕ 18/10/2025 ರ ಶನಿವಾರದಂದು ಅಮೃತ ಮಹೋತ್ಸವದ ಪ್ರಯುಕ್ತ ನಡೆಸಲಾದ ತಿಂಗಳ ಸರಣಿ ಕಾರ್ಯಕ್ರಮದ ಅಕ್ಟೋಬರ್ ತಿಂಗಳ ಕಾರ್ಯಕ್ರಮವಾದ ವಿಜ್ಞಾನ ಮಾದರಿ ಸ್ಪರ್ಧೆ ಕಾರ್ಯಕ್ರಮವು ನಡೆಯಿತು. ಈ ಕಾರ್ಯಕ್ರಮದಲ್ಲಿ 5ನೇ 6 ನೇ ಮತ್ತು 7ನೇ ತರಗತಿಯಿಂದ ಒಟ್ಟು 15 ವಿದ್ಯಾರ್ಥಿಗಳು ಸ್ಪರ್ಧಿಸಿದರು. ದೀಪ ಬೆಳಗಿಸುವುದರ ಮೂಲಕ ಸ್ಪರ್ಧೆಗೆ ಚಾಲನೆಯನ್ನು ನೀಡಿದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಹಾಗೂ ತೀರ್ಪುಗಾರರಾಗಿ ಆಗಮಿಸಿದ ರವೀಂದ್ರನಾಥ ಜೋಶಿ ಮತ್ತು ಕೂಡಬೆಟ್ಟು ಪ್ರೌಢಶಾಲೆಯ ವಿಜ್ಞಾನ ಶಿಕ್ಷಕರಾದ ಪ್ರಜ್ಞಾ ಹಾಗೂ ಫಾರ್ಮಸಿಸ್ಟ್ ಆಗಿರುವ ಅಶ್ವಿನಿ ನಾಯಕ್ ಪಾಲ್ಗೊಂಡಿದ್ದರು. ವಿದ್ಯಾವರ್ಧಕ ಸಂಘದ ಸದಸ್ಯರಾಗಿರುವ ದಿನೇಶ್ ನಾಯಕ್ ಮತ್ತು ಶಾಲಾ ಮುಖ್ಯೋಪಾಧ್ಯಾಯರಾದ ಪೂರ್ಣಿಮಾ ಶೆಣೈ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತುಗಳನ್ನಾಡಿ ಮಕ್ಕಳಿಗೆ ಶುಭಾಶಯವನ್ನು ಕೋರಿದರು.

ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ : ವೇದಾಂತ್ ಗೋರೆ 7 ನೇ ತರಗತಿ ದ್ವಿತೀಯ ಸ್ಥಾನ : ಸಮೀರಾಣಾ ಮರಾಠೆ 7 ನೇ ತರಗತಿ ತೃತೀಯ ಸ್ಥಾನ: ನಿಹಾರಿಕಾ 7 ನೇ ತರಗತಿ ಸ್ಥಾನಗಳಿಸಿದ ವಿದ್ಯಾರ್ಥಿಗಳಿಗೆ ಮತ್ತು ತಂಡಗಳಿಗೆ ಹಾಗೂ ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೆ ಕಾರ್ಯಕ್ರಮದಲ್ಲಿ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಪೋಷಕರು, ಶಿಕ್ಷಕ ವೃಂದದವರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶಿಕ್ಷಕಿ ಶುಭಾ ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಸುನಿತಾ ಇವರು ಸ್ವಾಗತಿಸಿದರು.ಅನುಪಮಾ ಇವರು ವಂದನಾರ್ಪಣೆ ಗೈದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page