22.3 C
Udupi
Tuesday, February 3, 2026
spot_img
spot_img
HomeBlogಶ್ರೀ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮಾಳ, ಗುರುಕುಲ 75 ಕಾರ್ಯಕ್ರಮದ ತಿಂಗಳ ಸರಣಿ...

ಶ್ರೀ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮಾಳ, ಗುರುಕುಲ 75 ಕಾರ್ಯಕ್ರಮದ ತಿಂಗಳ ಸರಣಿ ಕಾರ್ಯಕ್ರಮ

ಯೋಗ ತರಗತಿ ಹಾಗೂ ಸಂಸ್ಕೃತ ಭಾಷಾ ಕೌಶಲ್ಯ ತರಬೇತಿ ಇದರ ಉದ್ಘಾಟನಾ ಕಾರ್ಯಕ್ರಮ

ಶ್ರೀ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮಾಳ ಇಲ್ಲಿ ಗುರುಕುಲ 75 ಕಾರ್ಯಕ್ರಮದ ತಿಂಗಳ ಸರಣಿ ಕಾರ್ಯಕ್ರಮದಡಿ ವಿಶ್ವ ಯೋಗ ದಿನದ ಪ್ರಯುಕ್ತ ಯೋಗ ತರಗತಿ ಹಾಗೂ ಸಂಸ್ಕೃತ ಭಾಷಾ ಕೌಶಲ್ಯ ತರಬೇತಿ ಇದರ ಉದ್ಘಾಟನಾ ಕಾರ್ಯಕ್ರಮವು ನಡೆಯಿತು.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ, ಶ್ರೀಮತಿ ಗೀತಾ ಸೇರಿ ಗಾರ್ ಹಾಗೂ ಅತಿಥಿಗಳು ಸೇರಿ ದೀಪ ಬೆಳಗಿಸುವ ಮೂಲಕ ಮಾಡಲಾಯಿತು. ಮುಖ್ಯ ಅತಿಥಿಗಳಾಗಿ ಯೋಗ ಶಿಕ್ಷಕರಾದ ಅಶೋಕ್ ಕುಮಾರ್ ಕಾರ್ಕಳ ಸಂಸ್ಕೃತ ಭಾಷಾ ಕೌಶಲ್ಯ ತರಬೇತುದಾರರಾದ ಮಹಾಂತೇಶ್ ಗುರುಕುಲ ವಿದ್ಯಾವರ್ಧಕ ಸಂಘದ ಸದಸ್ಯರಾದ ಶ್ರೀಮತಿ ವಸಂತಿ ಹಾಗೂ ಮುಖ್ಯ ಶಿಕ್ಷಕರು ಉಪಸ್ಥಿತರಿದ್ದರು.

ಯೋಗ ಶಿಕ್ಷಕರು ಯೋಗವನ್ನು ಕಲಿಯುವುದರಿಂದ ನಮಗೆ ಆಗುವ ಪ್ರಯೋಜನಗಳು ಆರೋಗ್ಯ ಕಾಪಾಡಿಕೊಳ್ಳುವಲ್ಲಿ ತುಂಬಾ ಸಹಕಾರಿಯಾಗುತ್ತದೆ ಎಂದು ತಮ್ಮ ಸ್ವಂತ ಅನುಭವದ ಉದಾಹರಣೆಯೊಂದಿಗೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಮುಖ್ಯ ಶಿಕ್ಷಕರು ತಮ್ಮ ಪ್ರಸ್ತಾವನೆ ನುಡಿಯಲ್ಲಿ ಅಮೃತ ಮಹೋತ್ಸವದ ಕಾರ್ಯಕ್ರಮಗಳ ಬಗ್ಗೆ ವಿವರವಾಗಿ ತಿಳಿಸಿದರು ಸ್ವಾಗತವನ್ನು ಮತ್ತು ಕಾರ್ಯಕ್ರಮ ನಿರೂಪಣೆಯನ್ನು ಶಿಕ್ಷಕಿ ಅನುಪಮಾ ಇವರು ನಡೆಸಿ ಧನ್ಯವಾದ ಸಹ ಶಿಕ್ಷಕಿ ವಸಂತಿ ಇವರು ನೀಡಿದರು. ಎಲ್ಲಾ ಶಿಕ್ಷಕರು ಈ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು. ಸಂಸ್ಕೃತ ಭಾಷಾ ಅಭ್ಯಾಸ 10 ದಿನಗಳ ಕಾಲ ನಡೆಯಲಿದ್ದು ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಈ ತರಬೇತಿಯನ್ನು ನೀಡಲಾಗುತ್ತಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page