
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್(ರಿ )ಸಾಣೂರು ವಲಯ ಇದರ ವತಿಯಿಂದ ತಾಲೂಕಿನ ಸಾಣೂರು ಮುದ್ದಣ್ಣ ನಗರ ಸ. ಕಿ . ಪ್ರಾ. ಶಾಲೆಯಲ್ಲಿ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಸಾಣೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಯುವರಾಜ್ ಜೈನ್ ಉದ್ಘಾಟಿಸಿದರು. ಯೋಜನೆಯ ಕೃಷಿ ಮೇಲ್ವಿಚಾರಕರಾದ ಶ್ರೀ ಪ್ರಭಾಕರ್ ಇವರು ಪರಿಸರ ಸಂರಕ್ಷಣೆಯ ಬಗ್ಗೆ ಉಪಯುಕ್ತವಾದ ಮಾಹಿತಿಯನ್ನು ನೀಡಿದರು. ಹಾಗೂ ಪೂಜ್ಯರು ಶಿಕ್ಷಣ ಕ್ಷೇತ್ರಕ್ಕೆ ನೀಡುತ್ತಿರುವ ಹಲವಾರು ಸೌಲಭ್ಯಗಳು ಮತ್ತು ಕಾರ್ಯಕ್ರಮಗಳ ಬಗ್ಗೆ ಸಮಗ್ರ ಮಾಹಿತಿ ನೀಡಿ, ನಂತರ ಶಾಲಾ ಆವರಣದಲ್ಲಿ ಉಪಯುಕ್ತವಾದ ಸಸಿಗಳನ್ನು ನೆಡಲಾಯಿತು . ಆರೋಗ್ಯ ಸಹಾಯಕಿ ರೋಹಿಣಿ ಡೆಂಗ್ಯೂ ಜ್ವರದ ಬಗ್ಗೆ ಅಮೂಲ್ಯ ಮಾಹಿತಿ ನೀಡಿದರು.ಗ್ರಾಮ ಪಂಚಾಯತ್ ಸದಸ್ಯೆ ಪ್ರಮೀಳಾ,. ಕಾರ್ಕಳ ರೋಟರಿ ಕ್ಲಬ್ ನ ಅಧ್ಯಕ್ಷರಾದ ಇಕ್ಬಾಲ್ ಅಹಮದ್, ಕ್ಲಬ್ ನ ಪ್ರಮುಖರಾದ ಬಾಲಕೃಷ್ಣ ದೇವಾಡಿಗ, ಗಣೇಶ್ ಸಾಲಿಯಾನ್, ರೇಖಾ ಉಪಾಧ್ಯಾಯ, ಸೌಜನ್ಯ ಉಪಾಧ್ಯಾಯ, ವಸಂತ ಎಂ, ಪ್ರಕಾಶ್ ಪಿಂಟೋ , ಚೇತನ್ ನಾಯಕ್ ಪಾಲ್ಗೊಂಡಿದ್ದರು. ಯೋಜನೆಯ ವಲಯ ಮೇಲ್ವಿಚಾರಕರಾದ ಪ್ರಸಾದ್ ಕುಮಾರ್, ಸೇವಾ ಪ್ರತಿನಿಧಿ ಅರುಣಿ ರವೀಂದ್ರ ಪೂಜಾರಿ, ಶೌರ್ಯ ಘಟಕದ ಮಾಧವ ಭಂಡಾರ್ಕರ್, ಗೀತಾ ದೇವಾಡಿಗ, ಸಂತೋಷ್ ಬಂಗೇರ, ರಂಜಿತ್ ಆರ್ ಕೆ, ಜಯಶ್ರೀ ದೇವಾಡಿಗ, ಜಯಲಕ್ಷ್ಮಿ ಶೆಟ್ಟಿಗಾರ್, ಶ್ವೇತಾ ದೇವಾಡಿಗ, ಹೇಮಾ ಚಂದ್ರಹಾಸ್ ಪೂಜಾರಿ, ವಿದ್ಯಾನಂದ, ಎಸ್‌ಡಿಎಂಸಿ ಅಧ್ಯಕ್ಷರಾದ ಕರುಣಾಕರ ದೇವಾಡಿಗ, ಉಪಾಧ್ಯಕ್ಷರಾದ ಮಮತಾ ಶೆಟ್ಟಿಗಾರ್, ಊರ ಪ್ರಮುಖರಾದ ಧರ್ಮಡ್ಕ ಸುಂದರ ಶೆಟ್ಟಿ, ಶಾಂತರಾಮ ಶೆಟ್ಟಿ ಮಾಂಗಡಿ, ಯಶೋದ ಶೆಟ್ಟಿಗಾರ್,ವಾಸು ಶೆಟ್ಟಿಗಾರ್, ಮುಖ್ಯ ಶಿಕ್ಷಕ ಸಚ್ಚೇರಿಪೇಟೆ ಸುಧೀರ್ ನಾಯಕ್ ಕಾರ್ಯಕ್ರಮ ವನ್ನು ನಿರೂಪಿಸಿ, ಸ್ವಾಗತಿಸಿದರು,ಸಹ ಶಿಕ್ಷಕಿ ಗೀತಾ ಕೆ ವಂದಿಸಿದರು.





