24.3 C
Udupi
Tuesday, March 10, 2026
spot_img
spot_img
HomeBlogಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ರಿ.ಸಾಣೂರು ವಲಯ ವತಿಯಿಂದ,

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ರಿ.ಸಾಣೂರು ವಲಯ ವತಿಯಿಂದ,

ಲೀಲಾ ಆಚಾರ್ಯ ಮತ್ತು ಅಚ್ಚುತಾಚಾರ್ಯ ಮನೆಯ ದುರಸ್ತಿ ಕಾರ್ಯ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ರಿಜಿಸ್ಟರ್ಡ್ ಸಾಣೂರು ವಲಯ ಕಾರ್ಕಳ ತಾಲೂಕಿನ ಶೌರ್ಯ ವಿಪತ್ತು ನಿರ್ವಹಣಾ ಘಟಕದ ವತಿಯಿಂದ ದಿನಾಂಕ 8/3/26ರಂದು ಬೆಳಿಗ್ಗೆ 8 ರಿಂದ ಸಂಜೆ 6 ರ ವರೆಗೆ ಸಾಣೂರು ಕಾರ್ಯಕ್ಷೇತ್ರದ ಕುಜುಮರುಗುಡ್ಡೆ ಪರಿಸರದಲ್ಲಿ ವಾಸವಿರುವ ವಯಸ್ಸಾದ ಮತ್ತು ಮಕ್ಕಳಿಲ್ಲದ ದಂಪತಿಗಳಾದ ಶ್ರೀಮತಿ ಲೀಲಾ ಆಚಾರ್ಯ ಮತ್ತು ಅಚ್ಚುತಾಚಾರ್ಯ ಇವರ ಮನೆಯ ಮೇಲ್ಚಾವಣಿಯ ರೀಪುಗಳು ತುಂಡಾಗಿ ಬೀಳುವ ಪರಿಸ್ಥಿತಿಯಲ್ಲಿದ್ದನ್ನು ನೋಡಿ ಮೇಲ್ಚಾವಣಿಯ ಹಳೆಯ ರೀಪುಗಳನ್ನು ತೆಗೆದು ಹೊಸ ರೀಪುಗಳನ್ನು ಅಳವಡಿಸಿ ಮೇಲ್ಚಾವಣಿಯ ಕೆಲಸವನ್ನು ಮಾಡಿಕೊಡಲಾಯಿತು.

ಈ ಸಂದರ್ಭದಲ್ಲಿ ವಲಯದ ಮೇಲ್ವಿಚಾರಕರಾದ ಶ್ರೀಮತಿ ಸುಶೀಲ ಭೇಟಿ ನೀಡಿದರು. ಗ್ರಾಮ ಪಂಚಾಯಿತಿನ ಅಧ್ಯಕ್ಷರಾದ ಯುವರಾಜ್ ಜೈನ್ ಮತ್ತು ಬಾಲಾಂಜನೇಯ ಯುವಕ ಸಂಘ ಮರತಂಗಡಿ ಇದರ ಅಧ್ಯಕ್ಷರಾದ ಸಂತೋಷ್ ಸುವರ್ಣ ಇವರು ಸೇವಾ ಕಾರ್ಯಕ್ಕೆ ಸಹಕಾರ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಹಾಗೂ ತಾಲೂಕಿನ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಕ್ಯಾಪ್ಟನ್ ನವೀನ್ ಸೇವಾ ಕಾರ್ಯದಲ್ಲಿ ಪಾಲ್ಗೊಂಡು ಮಾರ್ಗದರ್ಶನ ನೀಡಿದರು.

spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page