29.4 C
Udupi
Sunday, January 4, 2026
spot_img
spot_img
HomeBlogಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ)ಕಾರ್ಕಳ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ)ಕಾರ್ಕಳ

ತಾಲೂಕು,ಶೌರ್ಯ ವಿಪತ್ತು ನಿರ್ವಹಣಾ ಸಮಿತಿ ಕಾರ್ಕಳ ತಾಲೂಕಿನ ಶೌರ್ಯ ಸ್ವಯಂ ಸೇವಕರ ತರಬೇತಿ ಕಾರ್ಯಗಾರ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ)ಕಾರ್ಕಳ ತಾಲೂಕು,ಶೌರ್ಯ ವಿಪತ್ತು ನಿರ್ವಹಣಾ ಸಮಿತಿ ಕಾರ್ಕಳ ತಾಲೂಕಿನ ಶೌರ್ಯ ಸ್ವಯಂ ಸೇವಕರ ತರಬೇತಿ ಕಾರ್ಯಗಾರವನ್ನು ರಾಜಪುರ ಸಭಾಭವನ ಜೋಡು ರಸ್ತೆ ಕಾರ್ಕಳದಲ್ಲಿ ನಡೆಸಲಾಯಿತು.

ತರಬೇತಿ ಕಾರ್ಯಗಾರದ ಉದ್ಘಾಟನೆಯನ್ನು ಕಡಾರಿ ರವೀಂದ್ರ ಪ್ರಭು, ಅಧ್ಯಕ್ಷರು ರಾಜಪುರ ಸಾರಸ್ವತ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಕಾರ್ಕಳರವರು ದೀಪ ಬೆಳಗಿಸಿ ಕಳೆದ 5 ವರ್ಷಗಳಿಂದ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವ ಶೌರ್ಯ ಸ್ವಯಂ ಸೇವಕರಿಗೆ ಶುಭ ಹಾರೈಸಿ ಕಾರ್ಕಳ ತಾಲೂಕಿನ ಈ ಶೌರ್ಯ ಘಟಕವು ಮೂರು ವರ್ಷದಿಂದ ಉತ್ತಮ ರೀತಿಯಲ್ಲಿ ಸೇವೆಯನ್ನು ನೀಡುತ್ತಿದ್ದು ಮುಂದಿನ ದಿನದಲ್ಲಿ ರಾಜ್ಯಮಟ್ಟದಲ್ಲಿ ಗುರುತಿಸುವಂತೆ ಆಗಲೆಂದು ಶುಭ ಹಾರೈಸಿದರು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಉದಯ್ ಕುಮಾರ್ ಹೆಗ್ಡೆ ವಹಿಸಿ ಕಾರ್ಯಕ್ರಮದ ಉದ್ದೇಶವನ್ನು ತಿಳಿಸಿ ಈ ತರಬೇತಿಯನ್ನು ಉತ್ತಮ ರೀತಿಯಲ್ಲಿ ಪಡೆದುಕೊಂಡು ವಿಪತ್ತು ಬಂದಾಗ ಕಾರ್ಯರೋಪಕ್ಕೆ ತರುವ ಹಾಗೆ ಮಾಹಿತಿ ನೀಡಿದರು.

ಶೌರ್ಯ ವಿಪತ್ತು ನಿರ್ವಹಣಾ ಕಾರ್ಯಕ್ರಮ ಯೋಜನಾಧಿಕಾರಿಗಳಾದ ಜೈವಂತ್ ಪಟಗಾರರವರು ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಕಿಶೋರ್ ಕುಮಾರ್ ಯೋಜನಾಧಿಕಾರಿಯವರು,ಕಾರ್ಕಳ ತಾಲೂಕು ಸಮಿತಿಯ ಮಾಸ್ಟರ್ ಸದಾನಂದ ಸಾಲ್ಯಾನ್,ಮಾಸ್ಟರ್ ನವೀನ್ ರವರು ಉಪಸ್ಥಿತರಿದ್ದರು.

ತರಬೇತಿ ಕಾರ್ಯಗಾರದಲ್ಲಿ ಕಾರ್ಕಳ ತಾಲೂಕಿನ ಶೌರ್ಯ ಘಟಕಗಳ ಸಂಯೋಜಕರು, ಘಟಕ ಪ್ರತಿನಿಧಿಗಳು, ಸ್ವಯಂ ಸೇವಕರು ಭಾಗವಹಿಸಿದ್ದರು.

ಕಾರ್ಕಳ ತಾಲೂಕು ಕ್ಷೇತ್ರ ಯೋಜನಾಧಿಕಾರಿ ಬಾಲಕೃಷ್ಣ ಹಿರಿಂಜ ಸ್ವಾಗತಿಸಿ, ಮೇಲ್ವಿಚಾರಕರಾದ ಶ್ರೀಮತಿ ಗೀತಾ ನಿರೂಪಿಸಿ, ಗಿರೀಶ್ ವಂದಿಸಿದರು.

spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page