ಹಿಂದೂ ರುದ್ರ ಭೂಮಿಗೆ 1,51,630 ಮೊತ್ತದ ಸಿಲಿಕಾನ್ ಚೇಂಬರ್ ಮಂಜೂರು

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಜಗೋಳಿ ವಲಯ ಚೌಕಿ ಕಾರ್ಯಕ್ಷೇತ್ರದ ಹಿಂದೂ ರುದ್ರ ಭೂಮಿಗೆ ಪರಮ ಪೂಜ್ಯರು 151630 ಮೊತ್ತದ ಸಿಲಿಕಾನ್ ಚೇಂಬರ್ ಮಂಜೂರು ಮಾಡಿರುತ್ತಾರೆ.
ಕಾರ್ಕಳ ತಾಲೂಕು ಯೋಜನಾಧಿಕಾರಿ ಗಳು ಶ್ರೀಮತಿ ಹೇಮಲತಾ ಮತ್ತು ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯರು ಹರಿಶ್ಚಂದ್ರ ತೆಂಡೂಲ್ಕರ್ ರವರು ಗ್ರಾಮ ಪಂಚಾಯತ್ ಅಧ್ಯಕ್ಷರು ಉಮೇಶ್ ಪೂಜಾರಿ ಮತ್ತು ಸದಸ್ಯರಿಗೆ ಮಂಜೂರಾತಿ ಪತ್ರ ವಿತರಣೆ ಮಾಡಿದರು.
ಈ ಸಂದರ್ಭ ಊರಿನ ಗಣ್ಯರು ರತ್ನಾಕರ ಜೈನ್ ಕಡಂದಲಾಜೆ, ಯುತ ಸುಕುಮಾರ್ ಜೈನ್, ಯುತ ಸುಕೇಶ್ ಶೆಟ್ಟಿ, ಬಜಗೋಳಿ ವಲಯ ಅದ್ಯಕ್ಷರು ಪ್ರವೀಣ್ ಹೆಗ್ಡೆ, ಚೌಕಿ ಒಕ್ಕೂಟ ಅದ್ಯಕ್ಷರು ವೇದಾ, ನವ ಜೀವನ ಸಮಿತಿ ಸದಸ್ಯರು ನಾರಾಯಣ ಪೂಜಾರಿ, ವಲಯದ ಮೇಲ್ವಿಚಾರಕರು ಮಧು ಕಿರಣ್, ಸೇವಾ ಪ್ರತಿನಿಧಿ ಪುಷ್ಪವತಿ ಹೆಗ್ಡೆ, ನಿಕಟ ಪೂರ್ವ ಅಧ್ಯಕ್ಷರು ಪದಾಧಿಕಾರಿ ಗಳು, ಸದಸ್ಯರು ಉಪಸ್ಥಿತರಿದ್ದರು.






















































