31.1 C
Udupi
Monday, April 13, 2026
spot_img
spot_img
HomeBlogಶ್ರೀ ಕ್ಷೇತ್ರ ಗ್ರಾಮಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ (ರಿ )ಕಾರ್ಕಳ ತಾಲ್ಲೂಕು ಕಾರ್ಕಳ ನಗರ...

ಶ್ರೀ ಕ್ಷೇತ್ರ ಗ್ರಾಮಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ (ರಿ )ಕಾರ್ಕಳ ತಾಲ್ಲೂಕು ಕಾರ್ಕಳ ನಗರ ಶೌರ್ಯ ವಿಪತ್ತು ಘಟಕ ಮತ್ತು ಸಂತಾ ಲಾರೆಸ್ಸ್ ಇಕೋ ಕ್ಲಬ್ ಅತ್ತೂರು ಸಹಯೋಗದಲ್ಲಿ ಪರಿಸರ ಕಾರ್ಯಕ್ರಮ

ಕಾರ್ಕಳ: ಶ್ರೀ ಕ್ಷೇತ್ರ ಗ್ರಾಮಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ (ರಿ )ಕಾರ್ಕಳ ತಾಲ್ಲೂಕು ಕಾರ್ಕಳ ನಗರ ಶೌರ್ಯ ವಿಪತ್ತು ಘಟಕ ಮತ್ತು ಸಂತಾ ಲಾರೆಸ್ಸ್ ಇಕೋ ಕ್ಲಬ್ ಅತ್ತೂರು ಇವರ ನೇತೃತ್ವದಲ್ಲಿ ಪರಿಸರ ಕಾರ್ಯಕ್ರಮವು ಜುಲೈ 26 ರಂದು 10.30 ಕ್ಕೆ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಫಾದರ್ ಲ್ಯಾರಿಪಿಂಟೋ ಸಹಾಯಕ ಧರ್ಮಗುರುಗಳು ಸಂತಾ ಲಾರೆನ್ಸ್ ಬಾಸಿಲಿಕ ಅತ್ತೂರು ಇವರು ವಹಿಸಿದ್ದು ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದರು ಹಾಗೂ ಶಾಲೆಗೆ ಜ್ಞಾನದೀಪ ಶಿಕ್ಷಕರ ಒದಗಣೆ ಮಾಡಿದಕ್ಕೆ ಪೂಜ್ಯರಿಗೆ ಕೃತಜ್ಞತೆ ಸಲ್ಲಿಸಿದರು.ವಲಯ ಮೇಲ್ವಿಚಾರಕರಾದ ಶ್ರೀಮತಿ ಗೀತಾ ರವರು ಪ್ರಾಸ್ತವಿಕ ಮಾತನಾಡಿದರು. ಸುಬ್ರಮಣ್ಯ ಉಪಾಧ್ಯ ಮುಖ್ಯಶಿಕ್ಷಕರು ಸಂತ ಲಾರೆನ್ಸ್ ಪ್ರೌಢಶಾಲೆ ಅತ್ತೂರು ಇವರು ಸ್ವಾಗತಿಸಿದರು. ಪ್ರದೀಪ್ ನಾಯಕ್ ಶಾಲಾ ಮುಖ್ಯ ಶಿಕ್ಷಕರು ಸಂತ ಲಾರೆನ್ಸ್ ಹಿರಿಯ ಪ್ರಾಥಮಿಕ ಶಾಲೆ ಇವರು ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು

ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿಯಾದ ಗುರುರಾಜ್ ಭಟ್, ನಿಟ್ಟೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶೋಭಾ, ಶಾಲಾ ಶಿಕ್ಷಕವೃಂದ ಶಿಕ್ಷಕೇತರವೃಂದ, ಕೃಷಿ ಅಧಿಕಾರಿ ಪ್ರಭಾಕರ್,ಸೇವಾಪ್ರತಿನಿಧಿ ಕುಮಾರಿ ಶೀತಲ್, ಕಾರ್ಕಳ ಶೌರ್ಯ ವಿಪತ್ತು ಘಟಕದ ಘಟಕ ಪ್ರತಿನಿಧಿ ಮಂಜುನಾಥ್ ಪಾಟೀಲ್ ಹಾಗೂ ಸದಸ್ಯರಾದ ರಮೇಶ್ ಮೂಲ್ಯ , ಪ್ರಶಾಂತ್ ಪೂಜಾರಿ, ವಾಸು ಆಚಾರ್ಯ,ಸುಧೀರ್ ಶೆಟ್ಟಿಗಾರ್,ಶ್ರೇಯಸ್, ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page