ಶ್ರಾವಣ ಮಾಸದ ಹೂವಿನ ಪೂಜೆಯ ಪೂರ್ವಭಾವಿಯಾಗಿ ದೇವಳದ ಒಳ ಹಾಗೂ ಹೊರ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮ

ಕಾರ್ಕಳ :ಶಿವತಿಕೆರೆ ಶ್ರೀ ಉಮಾಮಹೇಶ್ವರ ದೇವಸ್ಥಾನ ಹಿರಿಯಂಗಡಿ ಕಾರ್ಕಳ. ಇಲ್ಲಿ ಶ್ರಾವಣ ಮಾಸದ ಹೂವಿನ ಪೂಜೆಯ ಪೂರ್ವಭಾವಿಯಾಗಿ ದೇವಳದ ಒಳ ಹಾಗೂ ಹೊರ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸಲಾಯಿತು.
ಕಾರ್ಕಳ ಶೌರ್ಯ ಘಟಕದ ಅಧ್ಯಕ್ಷರಾದ ಮಂಜುನಾಥ ಪಾಟೀಲ್ ಮತ್ತು ದೇವಸ್ಥಾನದ ಸೇವಾಸಮಿತಿಯ ಅಧ್ಯಕ್ಷರಾದ ನಾಗೇಶ್ ದೇವಾಡಿಗ,ಇತರ ಪಧಾಧಿಕಾರಿಗಳು,ಕಾರ್ಕಳ ಶೌರ್ಯ ಘಟಕದ ಸದಸ್ಯರು ಹಾಗೂ ದೇವಸ್ಥಾನದ ಸೇವಾಸಮಿತಿಯ ಸದಸ್ಯರುಗಳೊಂದಿಗೆ ಸೇರಿ ಸ್ವಚ್ಛತಾ ಕಾರ್ಯವನ್ನು ನಡೆಸಿದರು.
ಕಾರ್ಕಳ ಪುರಸಭಾ ಅಧ್ಯಕ್ಷರಾದ ಯೋಗೀಶ್ ದೇವಾಡಿಗ, ದೇವಳದ ಮೊಕ್ತೇಸರರುಗಳಾದ ಶ ಸುದರ್ಶನ ಭಂಡಾರಿ, ಕೆ.ಬಿ ಗುರುಪ್ರಾಸಾದ್ ರಾವ್,ಬಾಲಕೃಷ್ಣದೇವಾಡಿಗ,ಸದಸ್ಯರುಗಳು ಆರುಣದಿನೇಶ್, ಸಂದೇಶ ದೇವಾಡಿಗ, ರೇಷ್ಮಾ ಭಂಡಾರಿ, ಚಂಪಾ ದೇವಾಡಿಗ, ಸುಮಿತ್ರ ದೇವರಾಜ್, ರೂಪೇಶ್ ದೇವಾಡಿಗ, ಯಶವಂತ, ಕಿಶೋರ್, ಹರೀಶ್ ದೇವಾಡಿಗ, ಸುಬ್ರಹ್ಮಣ್ಯ, ನವೀನ್ ದೇವಾಡಿಗ. ಇವರುಗಳು ಪಾಲ್ಗೊಂಡಿದ್ದರು.