
ಶಾರದಾ ಮಹಿಳಾ ಮಂಡಳಿ (ರಿ), ಅನಂತಶಯನ ಇದರ 2026-28 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿಜ್ಯೋತಿ ಫಾಟಕ್, ಉಪಾಧ್ಯಕ್ಷರಾಗಿ ಸ್ವಾತಿ ಸಂತೋಷ್ ಕಾರ್ಯದರ್ಶಿಯಾಗಿ ಸ್ವಾತಿ ತಾಮ್ಹನಕರ್, ಜೊತೆ ಕಾರ್ಯದರ್ಶಿಯಾಗಿ ಸುಧಾ ಪ್ರಭು ಹಾಗೂ ಕೋಶಾಧಿಕಾರಿಯಾಗಿ ಸಾವಿತ್ರಿ ಮನೋಹರ್ ಆಯ್ಕೆಯಾದರು. ಕ್ರೀಡಾ ಕಾರ್ಯದರ್ಶಿಗಳಾಗಿ ಸೌಮ್ಯ ರಾವ್ ಹಾಗೂ ರಶ್ಮಿ, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಮಲ್ಲಿಕಾ ಹೆಬ್ಬಾರ್ ಮತ್ತು ಐ.ಕೆ. ಪ್ರಭಾವತಿ, ಭಜನಾ ಕಾರ್ಯದರ್ಶಿಗಳಾಗಿ ಅಕ್ಷತಾ ಪ್ರಭು ಮತ್ತು ಶೈಲಜಾ ರತ್ನಾಕರ್ ಇವರುಗಳು ಆಯ್ಕೆಯಾಗಿದ್ದಾರೆ.
ಸುಮಾರು 36 ವರ್ಷಗಳ ಹಿಂದೆ ಪ್ರಾರಂಭವಾದ ಈ ಮಹಿಳಾ ಮಂಡಳಿ, ಹಳೆ ಬೇರು-ಹೊಸ ಚಿಗುರು ಕೂಡಿರುವ ಮರದಂತೆ 18 ರ ನವ ತರುಣಿಯಿಂದ 90 ರ ಜ್ಞಾನ ವೃದ್ಧೆಯನ್ನೂ ಸೇರಿದಂತೆ ಸುಮಾರು 75 ರಷ್ಟು ಸದಸ್ಯೆಯರನ್ನು ಹೊಂದಿ ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ಮುಂದೆಯೂ ಕೂಡ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುವ ವಿಚಾರವನ್ನು ನೂತನ ಪದಾಧಿಕಾರಿಗಳು ಹಂಚಿಕೊಂಡಿದ್ದಾರೆ.






















































