
ಮಡಿಕೇರಿ: ಗೃಹಸಚಿವ ಡಾ.ಜಿ.ಪರಮೇಶ್ವರ್ ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತಾನಾಡಿ ಶಾಂತಿ ದೃಷ್ಟಿಯಿಂದಷ್ಟೇ ಯುದ್ಧ ಬೇಡ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಆ ಹೇಳಿಕೆಯನ್ನು ನಾವು ದೌರ್ಬಲ್ಯ ಎಂದು ಅರ್ಥೈಸಿಕೊಳ್ಳಬಾರದು ಎಂದು ಸಿಎಂ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಭಾರತ ಎಂದೂ ಏಕಾಏಕಿ ಯುದ್ಧ ಮಾಡಲು ಹೋಗಿಲ್ಲ. ಹಿಂದಿನಿಂದಲೂ ಶಾಂತಿಯನ್ನೇ ನಂಬಿಕೊಂಡಿದೆ. ಆದರೆ ನಮ್ಮನ್ನು ಕೆಣಕಿದಾಗ ನಾವು ಸೂಕ್ತ ಪ್ರತ್ಯುತ್ತರ ಕೊಟ್ಟಿದ್ದೇವೆ. ಸಿದ್ದರಾಮಯ್ಯ ಶಾಂತಿಯ ದೃಷ್ಟಿಯಿಂದಷ್ಟೇ ಹೇಳಿಕೆ ನೀಡಿದ್ದಾರೆ ಎಂದು ಹೇಳಿದರು.
ಪಾಕಿಸ್ತಾನಿಯರನ್ನು ದೇಶದಿಂದ ಹೊರ ಹಾಕುವಂತೆ ಕೇಂದ್ರ ಸರ್ಕಾರ ಆದೇಶ ನೀಡಿದ್ದು ಅದರಂತೆ ನಾವು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಿದ್ದೇವೆ. ಎಷ್ಟು ಮಂದಿ ಪಾಕಿಸ್ತಾನಿಯರು ಇದ್ದಾರೆ ಎಂಬ ಅಂಕಿ ಅಂಶಗಳನ್ನು ಸಂಗ್ರಹಿಸಲಾಗುತ್ತಿದ್ದು ಅವರನ್ನು ತಕ್ಷಣವೇ ವಾಪಸ್ ಕಳುಹಿಸಲಾಗುತ್ತಿದೆ. ಆದರೆ ಕೇಂದ್ರ ಸರ್ಕಾರವೇ ದೀರ್ಘಾವಧಿ ವೀಸಾ ಪಡೆದಿರುವವರು, ಮದುವೆ ಆಗಿರುವವರಿಗೆ ಕೆಲವೊಂದಿಷ್ಟು ರಿಯಾಯಿತಿಗಳನ್ನು ನೀಡಿದ್ದು ಅಂತಹವರನ್ನು ಹೊರತುಪಡಿಸಿ ಉಳಿದ ಎಲ್ಲಾ ಪಾಕಿಸ್ತಾನಿಯರನ್ನೂ ಹೊರಹಾಕಲಾಗುವುದು ಎಂದು ಮಾಹಿತಿ ನೀಡಿದರು.





