
ಸಾಣೂರು :ಶಕ್ತಿ ಸಮೃದ್ಧಿ ಸಂಜೀವಿನಿ ಗ್ರಾಮ ಮಟ್ಟದ ಒಕ್ಕೂಟ ( ರಿ ) ಸಾಣೂರು ಗ್ರಾಮ ಪಂಚಾಯತ್ ಇದರ ವತಿಯಿಂದ ದಿನಾಂಕ :-05/08/2025 ನೇ ಮಂಗಳವಾರ ಸಾಣೂರು ಗ್ರಾಮ ಪಂಚಾಯತ್ ನ ಸುವರ್ಣ ಗ್ರಾಮೋದಯ ಸೌಧ ದಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ ವನ್ನು ನಡೆಸಲಾಯಿತು..
ಈ ಸಂದರ್ಭದಲ್ಲಿ ಆರೋಗ್ಯ ತಪಾಸಣಾ ಶಿಬಿರ ಹಾಗೂ ಹತ್ತು ಬಗೆಯ ಆಟೋಟ ಸ್ಪರ್ಧೆ ಗಳನ್ನು ಏರ್ಪಡಿಸಲಾಯಿತು. ಪ್ರಾಸ್ತಾವಿಕ ವಾಗಿ ನಿಕಟ ಪೂರ್ವ ಅಧ್ಯಕ್ಷರು ಜಯಲಕ್ಷ್ಮಿ ಶೆಟ್ಟಿಗಾರ್ ಮಾತನಾಡಿದರು, ಕಾರ್ಯಕ್ರಮ ವನ್ನು ಪಂಚಾಯತ್ ಅಧ್ಯಕ್ಷರು ಉದ್ಘಾಟನೆ ಮಾಡಿದರು, ಸಾಣೂರು ಶಾಖೆ ಯ ಬ್ಯಾಂಕ್ ಬರೋಡ ದ ಪ್ರಬಂಧಕರು ಅವಿನಾಶ್ ಸರ್ pamjjby, pmsby ಬಗ್ಗೆ ಮಾಹಿತಿ ನೀಡಿದರು ಹಾಗೂ ಆರೋಗ್ಯ ಇಲಾಖೆ ಯ L H V ಅರುಣಾ ಕುಮಾರಿ ಮಲೇರಿಯಾ ವಿರೋಧ ಮಾಸಾಚರಣೆ ಯ ಬಗ್ಗೆ ಮಾಹಿತಿ ನೀಡಿದರು.

ಪಂಚಾಯತ್ ಅಧ್ಯಕ್ಷರು ಶುಭಕೋರಿದರು, ಹಾಗೂ ಅಂಗನವಾಡಿ ಟೀಚರ್ ಸಾಕಮ್ಮ ಆಟಿ ತಿಂಗಳ ಬಗ್ಗೆ ಮಾತನಾಡಿದರು ನಂತರ ಆಟೋಟ ಸ್ಪರ್ಧೆ ಗಳ ಮತ್ತು ಹೆಚ್ಚು ತಿನಿಸು ಮಾಡಿ ದವರಿಗೆ ಪ್ರಥಮ ದ್ವಿತೀಯ ಹಾಗೂ ಸಮಾಧಾನಕರ ಬಹುಮಾನ ವನ್ನು ವಿತರಣೆ ಮಾಡಲಾಯಿತು. ಒಕ್ಕೂಟ ದ ಅಧ್ಯಕ್ಷರು ಗೀತಾ ದೇವಾಡಿಗ ಅಧ್ಯಕ್ಷೀಯ ಭಾಷಣ ಮಾಡಿದರು,ವೇದಿಕೆ ಯಲ್ಲಿ ಪಂಚಾಯತ್ ಸದಸ್ಯರಾದ ಸುಮತಿ, ಪ್ರಮೀಳಾ ಹಾಗೂ ಒಕ್ಕೂಟ ದ ಕೋಶಾಧಿಕಾರಿ ವನಿತಾ ಉಪಸ್ಥಿತರಿದ್ದರು. ಒಟ್ಟು 55 ಬಗೆಯ ತಿನಿಸು ಗಳನ್ನು ಮಾಡಲಾಯಿತು.ಸಭೆ ಯಲ್ಲಿ ವಾರ್ಡ್ ಪದಾಧಿಕಾರಿಗಳು, ಪಂಚಾಯತ್ ಸಿಬ್ಬಂದಿ, ಆರೋಗ್ಯ ಇಲಾಖೆ ಯ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಸಂಘದ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮ ವನ್ನು ಕಾರ್ಯದರ್ಶಿ ಪ್ರಸಾದಿನಿ ಜೈನ್‌ನಿರೂಪಿಸಿ ದರು, MBK ಪ್ರಾರ್ಥನೆ ಗೈದರು, LCRP ಜಯಶ್ರೀ ದೇವಾಡಿಗ ಸ್ವಾಗತಿಸಿದರು, LCRP ಶ್ವೇತಾ ದೇವಾಡಿಗ ಧನ್ಯವಾದ ವಿತ್ತರು ರಾಷ್ಟ್ರಗೀತೆ ಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.