
ಬೆಂಗಳೂರು: ವಿಪಕ್ಷ ನಾಯಕ ಆರ್.ಅಶೋಕ್ ಸುದ್ದಿಗಾರರೊಂದಿಗೆ ಮಾತನಾಡಿ ವೋಟ್ ಚೋರಿ ಕಾಂಗ್ರೆಸ್ನವರ ಬ್ರ್ಯಾಂಡ್ ಆಗಿತ್ತು, ಆದರೆ ಜನ ಈ ಡೈಲಾಗ್ನ್ನು ನಂಬಲ್ಲ, ಇನ್ಮುಂದೆ ರಾಹುಲ್ ಗಾಂಧಿಗೆ ರಾಹುಕಾಲ ಶುರು, ಹೀಗಾಗಿ ಸಿದ್ದರಾಮಯ್ಯ ಹೇಳಿದಂತೆ ಕೇಳಬೇಕು ಎಂದು ವ್ಯಂಗ್ಯವಾಡಿದ್ದಾರೆ.
ವೋಟ್ ಚೋರಿ ಬೋಗಸ್ ಅಂತ ಬಿಹಾರದ ಜನತೆ ತಿರಸ್ಕರಿಸಿದ್ದಾರೆ. ಸೋತ ಮೇಲೆ ಮತಚೋರಿ ಅಂತ ಕಾಂಗ್ರೆಸ್ ನಾಯಕರು ಡೈಲಾಗ್ ಹೊಡೆಯುತ್ತಾರೆ. ಈಗ ಈ ಡೈಲಾಗ್ ಅನ್ನು ಜನ ನಂಬಲ್ಲ.
ಕಾಂಗ್ರೆಸ್ ಹೈಕಮಾಂಡ್ ಬಿಹಾರ ಫಲಿತಾಂಶದಿಂದ ಮಂಕಾಗಿದ್ದರೆ ಇತ್ತ ಬಿಹಾರ ಫಲಿತಾಂಶದಿಂದ ಸಿದ್ದರಾಮಯ್ಯ ಸ್ಟ್ರಾಂಗ್ ಆಗಿದ್ದಾರೆ. ಇಷ್ಟು ದಿನ ರಾಹುಲ್ ಗಾಂಧಿ ಮಾತನ್ನು ಸಿದ್ದರಾಮಯ್ಯ ಕೇಳುತ್ತಿದ್ದರು. ಈಗ ಸಿದ್ದರಾಮಯ್ಯ ಮಾತನ್ನು ರಾಹುಲ್ ಗಾಂಧಿ ಕೇಳಬೇಕು. ರಾಹುಲ್ ಗಾಂಧಿಯನ್ನು ಸಿದ್ದರಾಮಯ್ಯ ಹಾವಾಡಿಗರ ರೀತಿ ಆಡಿಸ್ತಾರೆ. ರಾಹುಲ್ ಗಾಂಧಿಗೆ ರಾಹುಕಾಲ ಶುರುವಾಗಿದೆ, ಸಿದ್ದರಾಮಯ್ಯಗೆ ಶುಕ್ರದೆಸೆ ಶುರುವಾಗಿದೆ. ಕಾಂಗ್ರೆಸ್ಗೆ ರಾಜ್ಯದಲ್ಲೂ ಎರಡೇ ವರ್ಷ ಇರೋದು. ಅಲ್ಲೀವರೆಗೂ ಏನೇನು ಮಾಡ್ತೀರೋ ಮಾಡಿ. ವೋಟ್ ಚೋರಿ ಆರೋಪಕ್ಕೆ ಜನರಿಗೆ ಕ್ಷಮೆ ಕೇಳಲಿ ಎಂದು ಹೇಳಿದ್ದಾರೆ.






