
ಇಂದು ಬಿಗ್ ಬಾಸ್’ ಖ್ಯಾತಿಯ ಚೈತ್ರಾ ಕುಂದಾಪುರ ಉಡುಪಿಯ ಹಿರಿಯಡ್ಕದ ಶ್ರೀಕಾಂತ್ ಕಶ್ಯಪ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಚೈತ್ರಾ ಮತ್ತು ಶ್ರೀಕಾಂತ್ 12 ವರ್ಷಗಳಿಂದ ಪ್ರೀತಿಸುತ್ತಿದ್ದು ಗುರುಹಿರಿಯರ ಸಮ್ಮತಿಯೊಂದಿಗೆ ಪ್ರೀತಿಸಿದ ಹುಡುಗನೊಂದಿಗೆ ಸರಳ ವಿವಾಹವಾಗಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಕುಟುಂಬಕ್ಕೆ ಆಪ್ತರಾದ 100 ಜನರಿಗೆ ಮಾತ್ರ ಮದುವೆಗೆ ಆಹ್ವಾನಿಸಿದ್ದು ವೈದಿಕ ಶಾಸ್ತ್ರದಂತೆ ಮದುವೆ ಕಾರ್ಯಕ್ರಮ ನಡೆದಿದೆ.
ಚೈತ್ರಾಗೆ ಕಾಲೇಜಿನಲ್ಲಿ ಓದುತ್ತಿದ್ದಾಗ ಶ್ರೀಕಾಂತ್ ಕಶ್ಯಪ್ ಪರಿಚಯವಾಗಿ ಜಗಳದಿಂದ ಶುರುವಾದ ಸ್ನೇಹ ಈಗ ಮದುವೆಗೆ ಮುನ್ನುಡಿ ಬರೆದಿದೆ. ಶ್ರೀಕಾಂತ್ ಕಶ್ಯಪ್ ಸುದ್ದಿವಾಹಿನಿವೊಂದರಲ್ಲಿ ಚೈತ್ರಾ ಜೊತೆ ಕೆಲಸ ಮಾಡಿದ್ದು ಇದೀಗ ಜ್ಯೋತಿಷ್ಯ, ವಾಸ್ತು, ಪೌರೋಹಿತ್ಯದ ಕೆಲಸದಲ್ಲಿ ಶ್ರೀಕಾಂತ್ ತೊಡಗಿಸಿಕೊಂಡಿದ್ದಾರೆ.
ಬಿಗ್ ಬಾಸ್ ಸ್ಪರ್ಧಿಗಳಾದ ರಜತ್, ಗೋಲ್ಡ್ ಸುರೇಶ್ ಭಾಗಿಯಾಗಿ ನವದಂಪತಿಗೆ ಶುಭಹಾರೈಸಿದ್ದಾರೆ.