
ಚಂಡಿಗಡ: ಇತ್ತೀಚೆಗೆ ಪಂಜಾಬ್-ಹರಿಯಾಣ ಹೈಕೋರ್ಟ್ ಮಹತ್ವದ ಆದೇಶವನ್ನು ನೀಡಿದ್ದು ಅದೇನೆಂದರೆ ವೈದ್ಯರು ಬರೆಯುವ ಔಷದ ಚೀಟಿಗಳಲ್ಲಿ ಕೈಬರಹ ಜನರಿಗೆ ಅರ್ಥವಾಗುವಂತಿರಬೇಕು, ಇದು ಆರೋಗ್ಯ ಹಕ್ಕಿನ ಜೊತೆಗೆ ಮೂಲಭೂತ ಹಕ್ಕು ಕೂಡ ಎಂದು ಆದೇಶ ನೀಡಿದೆ.
ಔಷಧ ಚೀಟಿಗಳಲ್ಲಿ ಬರೆದಿರುವುದನ್ನು ಅರ್ಥ ಮಾಡಿಕೊಳ್ಳುವುದು ಆರೋಗ್ಯ ಮತ್ತು ಜನರ ಮೂಲಭೂತ ಹಕ್ಕು. ನ್ಯಾಯಾಂಗಕ್ಕೆ ಸಂಬಂಧಿಸಿದ ವೈದ್ಯಕೀಯ ದಾಖಲೆಗಳು ಓದಲು ಸಾಧ್ಯವಾಗದಿದ್ದರೆ ಅದರಿಂದ ಉಂಟಾಗುವ ಸಮಸ್ಯೆಗಳು ದೊಡ್ಡಮಟ್ಟದಲ್ಲಿ ಇರುತ್ತವೆ. ಹೀಗಾಗಿ ಇವುಗಳನ್ನು ಕಂಪ್ಯೂಟರ್ ಅಥವಾ ಮುದ್ರಿತವಾಗಿ ನೀಡುವ ಪ್ರವೃತ್ತಿ ಆರಂಭವಾಗುವವರೆಗೂ ಕ್ಯಾಪಿಟಲ್ ಅಕ್ಷರಗಳಲ್ಲಿ ವೈದ್ಯರು ಬರೆಯಬೇಕು ಎಂದು ಪೀಠವು ಕೇಂದ್ರ ಸರ್ಕಾರ ಮತ್ತು ಪಂಜಾಬ್-ಹರಿಯಾಣ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.