ಸ್ವರಲಯ ಸಂಗೀತ ಕಾರ್ಯಾಗಾರ

ವಿಹಾನಾ ಮೆಲೋಡಿಸ್ ಕರೋಕೆ ಗಾಯನ ತರಬೇತಿ ಸಂಸ್ಥೆ ಕಾರ್ಕಳ ಹಾಗೂ ರೋಟರಿ ಕ್ಲಬ್ ಕಾರ್ಕಳ ಇವರ ಸಹಭಾಗಿತ್ವದಲ್ಲಿ ಇಂದು ಮಧ್ಯಾಹ್ನ 3:30 ಕ್ಕೆ ಸರಿಯಾಗಿ ರೋಟರಿ ಬಾಲ ಭವನದಲ್ಲಿ ಸ್ವರ ಲಯ ಸಂಗೀತದ ಕುರಿತು ಕಾರ್ಯಾಗಾರ (ಸೆಮಿನಾರ್ ) ನಡೆಯಲಿದೆ.
ಈ ಕಾರ್ಯಾಗಾರವನ್ನು ಈ ಟಿವಿ ಎದೆತುಂಬಿ ಹಾಡುವೆನು ವಿನ್ನರ್, ಸುವರ್ಣ ಟಿವಿ ಕಾನ್ಫಿಡೆನ್ಸ್ ಸ್ಟಾರ್ ಸಿಂಗರ್ ಸೆಮಿಫೈನಲಿಸ್ಟ್, ಉದಯ ಟಿವಿ ಸಂಗೀತ ಮಹಾಯುದ್ಧ ವಿನ್ನರ್, ಝೀ ಕನ್ನಡ ಸ.ರೆ.ಗ.ಮ.ಪ ಸೀಸನ್ 20 ರ ಸೆಮಿಫೈನಲಿಸ್ಟ್ ಹಾಗೂ ಪ್ರಸ್ತುತ ಡೈಜಿ ವರ್ಲ್ಡ್ ಟಿ. ವಿ ಚಾನೆಲ್ ನಲ್ಲಿ ಪ್ರಧಾನ ತೀರ್ಪುಗಾರರಾಗಿರುವ ವಿದ್ವಾನ್ ಯಶವಂತ್ ಎಂ ಜಿ ಇವರು ಕಾರ್ಯಾಗಾರ ನಡೆಸಿಕೊಡಲಿದ್ದಾರೆ.








