
ವಿಹಾನಾ ಮೆಲೋಡಿಸ್ ಕರೋಕೆ ಗಾಯನ ತರಬೇತಿ ಸಂಸ್ಥೆಯು ಕಳೆದ ಎರಡುವರೆ ವರ್ಷಗಳಿಂದ ಕಾರ್ಕಳ ತಾಲೂಕಿನ ಸಂಗೀತ ಆಸಕ್ತರಿಗೆ ತರಬೇತಿ ನೀಡುತ್ತಾ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಯಶಸ್ವಿಯಾಗಿ ಮುಂದುವರೆಸಿಕೊಂಡು ಬಂದಿದೆ. ಇದೀಗ ವಿಹಾನಾ ಮೆಲೋಡಿಸ್ ಸಂಸ್ಥೆಯು ವಿನೂತನವಾಗಿ ಹೆಜ್ಜೆ ಇಡುತಿದ್ದು ತನ್ನ ಸದಸ್ಯರ ಪ್ರತಿಭೆಗೆ ಪೂರಕವಾಗಿ ವಿಶೇಷ ವೇದಿಕೆಯನ್ನು ಕಲ್ಪಿಸುವ ಪ್ರಯತ್ನವೆ ವಿಹಾನಾ ವಿನೂತನ.ವಿಹಾನಾ ಸಂಸ್ಥೆಯಿಂದ ಮೂಡಿಬರುವ ಎಲ್ಲಾ ಕಾರ್ಯಕ್ರಮಗಳು ಹಾಗೂ ತರಬೇತಿ ಸಂಬಂದಿತ ಚಟುವಟಿಕೆಗಳು ಇನ್ನು ಮುಂದೆ ಸಂಸ್ಥೆಯ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾಗುವುದು. ಆ ಮೂಲಕ ವಿಹಾನಾ ಸಂಸ್ಥೆಯು ವಿನೂತನವಾಗಿ ಎಲ್ಲಾ ಸಂಗೀತ ಪ್ರೀಯರಿಗೆ ತಲುಪಲಿದೆ. ಇದರ ಪ್ರಯುಕ್ತ ವಿಹಾನಾ ಮೆಲೋಡಿಸ್ ಸದಸ್ಯರೊಂದಿಗೆ ಕುಟುಂಬ ಸಮ್ಮಿಲನ ಕಾರ್ಯಕ್ರಮವನ್ನು ಆಚರಿಸುವ ಮೂಲಕ ವಿನೂತನವಾಗಿ ಸಂಸ್ಥೆಯು ತನ್ನ ಅಧಿಕೃತ ಸಾಮಾಜಿಕ ಜಾಲತಾಣಗಳನ್ನು ಲೋಕಾರ್ಪಣೆ ಮಾಡಲಾಯಿತು.
ಸೆಪ್ಟೆಂಬರ್ 5 ರಂದು ರೋಟರಿ ಬಾಲ ಭವನ ಕಾರ್ಕಳ ಇಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಲಯನ್ಸ್ ಕ್ಲಬ್ ಕಾರ್ಕಳ ಇಲ್ಲಿನ ಅಧ್ಯಕ್ಷರಾದ ಶ್ರೀ ರಾಜಾರಾಮ್ ಕಡಂಬ ಇವರು ಉದ್ಘಾಟನೆಯನ್ನು ನೆರವೇರಿಸಿ ಸಂಸ್ಥೆಗೆ ಶುಭ ಹಾರೈಸಿದರು. ವಿಹಾನಾ ಸಂಸ್ಥೆಯ ಅಧಿಕೃತ ಜಾಲತಾಣಗಳಾದ Facebook, Instagram Page ಹಾಗೂ Youtube ಚಾನೆಲ್ ಗಳ ಪ್ರೊಮೊ ವೀಡಿಯೋವನ್ನು ಜೆಸಿಐ ಕಾರ್ಕಳ ಇದರ ಅಧ್ಯಕ್ಷರಾದ ಶ್ರೀಮತಿ ಶ್ವೇತಾ ಎಸ್ ಜೈನ್ ಇವರು ಬಿಡುಗಡೆಗೊಳಿಸಿ ಈ ಸಂಸ್ಥೆಯಲ್ಲಿ 10 ವರ್ಷದ ಮಕ್ಕಳಿಂದ ಹಿಡಿದು 77 ವರ್ಷದ ಹಿರಿಯ ಸಂಗೀತ ಆಸಕ್ತರು ಕಲಿಯುತ್ತಿರುವುದು ಅತ್ಯಂತ ಶ್ಲಾಘನೀಯ ಈ ಸಂಸ್ಥೆಯು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.ಮುಖ್ಯ ಅತಿಥಿಗಳಾದ ಕುಮಾರೇಶ್ ಕಣಿಯೂರು ಇವರು ಸಾಮಾಜಿಕ ಜಾಲತಾಣಗಳ ತಾಂತ್ರಿಕ ವಿಷಯಗಳ ಕುರಿತು ಹಾಗೂ ಸಂಸ್ಥೆಯ ಕಾರ್ಯಕ್ರಮಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.ರೋಟರಿ ಕ್ಲಬ್ ಕಾರ್ಕಳ ಇದರ ಅಧ್ಯಕ್ಷರಾದ ಕೆ ನವೀನ್ ಚಂದ್ರ ಶೆಟ್ಟಿ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸಂಗೀತವು ಮನಸ್ಸಿಗೆ ಮುದ ನೀಡುತ್ತಿದೆ ಹಾಗೆಯೇ ವಿಹಾನಾ ಸಂಸ್ಥೆಯು ಕರೋಕೆ ತರಬೇತಿಯೊಂದಿಗೆ ಎಲ್ಲಾ ಸಂಗೀತ ಆಸಕ್ತರಿಗೆ ಸಂತೋಷವನ್ನು ಉಂಟು ಮಾಡುತ್ತಿದೆ, ವಿಹಾನಾ ಸಂಸ್ಥೆಗೆ ರೋಟರಿ ಸಂಸ್ಥೆಯು ಯಾವಾಗಲು ಸಹಕಾರವನ್ನು ನೀಡುತ್ತದೆ ಎಂದು ಶುಭ ಹಾರೈಸಿದರು. ಸಂಸ್ಥೆಯ ನಿರ್ದೇಶಕರಾದ ಶ್ರೀ ಶಿವಕುಮಾರ್ ಇವರು ಪ್ರಾಸ್ತವಿಕವಾಗಿ ಮಾತನಾಡಿದರು, ವೇದಿಕೆಯಲ್ಲಿ ಮುಖ್ಯ ತರಬೇತುದಾರರಾದ ಶ್ರೀಮತಿ ರಮ್ಯಾ ಸುಧೀಂದ್ರ ಇವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಪ್ರಶಾಂತ್ ಶೆಟ್ಟಿ ಪರಪ್ಪಾಡಿ ಇವರು ನಿರ್ವಹಿಸಿದರು. ಸಭಾ ಕಾರ್ಯಕ್ರಮದ ನಂತರ ವಿಹಾನಾ ಮೆಲೋಡಿಸ್ ಕರೋಕೆ ಗಾಯನ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು.
ವಿಹಾನಾ ಸಂಸ್ಥೆಗೆ ಸೇರಲು ಇಚ್ಚಿಸುವವರು ಈ ಸಂಖ್ಯೆಯನ್ನು ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದೆ
9743785410, 6361288299.

