24.5 C
Udupi
Saturday, August 9, 2025
spot_img
spot_img
HomeBlogವಿಶ್ವ ಹಿಂದೂ ಪರಿಷದ್ ಬಜರಂಗದಳ ಹಿಂದೂ ಜಾಗರಣ ವೇದಿಕೆ ಕಾರ್ಕಳದ ವತಿಯಿಂದ ಅಖಂಡ ಭಾರತ...

ವಿಶ್ವ ಹಿಂದೂ ಪರಿಷದ್ ಬಜರಂಗದಳ ಹಿಂದೂ ಜಾಗರಣ ವೇದಿಕೆ ಕಾರ್ಕಳದ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನ ಬೃಹತ್ ಪಂಜಿನ ಮೆರವಣಿಗೆ

ವಿಶ್ವ ಹಿಂದೂ ಪರಿಷದ್ ಬಜರಂಗದಳ ಹಿಂದೂ ಜಾಗರಣ ವೇದಿಕೆ ಕಾರ್ಕಳ 1947 ಅಗಸ್ಟ್ 14 ಮಧ್ಯರಾತ್ರಿ ಭಾರತ ತ್ರಿಖಂಡವಾಗಿ ಕತ್ತರಿಸಲ್ಪಟ್ಟ ಆ ಕರಾಳ ದುರಂತವನ್ನು ನೆನಪಿಸುತ್ತಾ ಕಳೆದುಹೋದ ಭಾಗಗಳೆಲ್ಲವನ್ನು ಮತ್ತೆ ಒಂದುಗೂಡಿಸುವ ಜನ ಜಾಗೃತಿಗಾಗಿ ನಡೆಯುವಂತ ಅಖಂಡ ಭಾರತ ಸಂಕಲ್ಪ ದಿನಬೃಹತ್ ಪಂಜಿನ ಮೆರವಣಿಗೆಯು ದಿನಾಂಕ 12 ಆಗಸ್ಟ್ 2025 ಮಂಗಳವಾರದಂದು ಸಮಯ 6 ಗಂಟೆಗೆ ಗಾಂಧಿ ಮೈದಾನ ದಿಂದ ಹೊರಟು ಕಾರ್ಕಳ ಬಸ್ ನಿಲ್ದಾಣದವರೆಗೆ ನಡೆಯಲಿದ್ದು ಪಂಜಿನ ಮೆರವಣಿಗೆಯ ಚಾಲನೆಯನ್ನು ಉದ್ಯಮಿಗಳಾದ ಅರುಣ್ ನಿಟ್ಟೆ ನೆರವೇರಿಸಲಿದ್ದಾರೆ

ನಂತರ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ನಿತ್ಯಾನಂದ ಪೈ ಉದ್ಯಮಿಗಳು ಕಾರ್ಕಳ, ದಿಕ್ಸೂಚಿ ಭಾಷಣವನ್ನು ಹಿಂದೂ ಜಾಗರಣ ವೇದಿಕೆಯ ಕರ್ನಾಟಕ ಪ್ರಾಂತ ಪ್ರಮುಖರಾದ ಉಲ್ಲಾಸ್ ಕೆ. ಟಿ ಹಾಗೂ ವಿಶ್ವ ಹಿಂದೂ ಪರಿಷದ್ ನ ಕರ್ನಾಟಕ ಪ್ರಾಂತ ಪ್ರಮುಖರಾದ ಸುನಿಲ್ ಕೆ ಆರ್ ಮಾಡಲಿದ್ದಾರೆ.. ಕಾರ್ಯಕ್ರಮದಲ್ಲಿ ಹಿಂದೂ ಜಾಗರಣ ವೇದಿಕೆ ಉಡುಪಿಯ ಜಿಲ್ಲಾ ಸಂಯೋಜಕರಾದ ರಾಜೇಶ್ ಉಚ್ಚಿಲ, ಕಾರ್ಕಳ ತಾಲೂಕು ಬಜರಂಗದಳದ ಸಂಯೋಜಕರಾದ ಮನೀಷ್ ನಿಟ್ಟೆ,ಕಾರ್ಕಳ ತಾಲೂಕು ಹಿಂದೂ ಜಾಗರಣ ವೇದಿಕೆಯ ಸಂಯೋಜಕರಾದ ಹರೀಶ್ ಬಜಗೋಳಿ ಉಪಸ್ಥಿತಿ ಇರಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page