
ಅಮೇರಿಕಾದ ಕ್ಯಾಲಿಪೋರ್ನಿಯಾದ Adobe ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ ವರ್ಗದವರು ಚೇತನಾ ವಿಶೇಷ ಶಾಲೆ ಕಾರ್ಕಳ ಇಲ್ಲಿಯ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿವರ್ಗದವರಿಗೆ ೨೦೨೬ನೇ ಇಸವಿಯ ಹೊಸ ವರ್ಷದ ಶುಭಾಶಯ ಕೋರುವ ಗ್ರಿಟಿಂಗ್ ಕಾರ್ಡ್ಗಳನ್ನು ಸ್ವತಃ ಕೈಯಲ್ಲಿ ತಯಾರಿಗೊಳಿಸಿ ಕಳುಹಿಸಿಕೊಟ್ಟಿರುತ್ತಾರೆ.
Adobe ಸಂಸ್ಥೆಯ ಸಿಬ್ಬಂದಿ ವರ್ಗದವರು ಮಾಡುವ ಈ ಸೇವಾ ಕಾರ್ಯಕ್ಕೆ Adobe ಸಂಸ್ಥೆಯ ವತಿಯಿಂದ ಪ್ರೋತ್ಸಾಹಧನವನ್ನು ಚೇತನಾ ವಿಶೇಷ ಶಾಲೆಗೆ ಕಳೆದ ನಾಲ್ಕು ವರ್ಷದಿಂದ ನೀಡಿ ಸಹಕರಿಸುತ್ತಿದ್ದಾರೆ.ಈ ಸೇವಾ ಕಾರ್ಯವನ್ನು ಕ್ಯಾಲಿಪೋರ್ನಿಯಾದ Adobe ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಶಿಫಾಲಿ ಶೆಟ್ಟಿಯವರು ತಮ್ಮೊಂದಿಗೆ ಜೊತೆಯಾಗಿ ಕೆಲಸ ಮಾಡುತ್ತಿರುವ 70 ಮಂದಿ ಸಿಬ್ಬಂದಿ ವರ್ಗದವರ ಸಹಕಾರದೊಂದಿಗೆ ಈ ಗ್ರಿಟಿಂಗ್ಸ್ ಕಾರ್ಡ್ಗಳನ್ನು ತಯಾರುಗೊಳಿಸಿ
ಕಳುಹಿಸುವ ತಂಡಕ್ಕೆ ಹಾಗೂ ಪ್ರತೀ ವರ್ಷದಂತೆ ಈ ಬಾರಿಯೂ ಶಿಫಾಲಿ ಶೆಟ್ಟಿಯವರ ಹೆತ್ತವರಾದ ಸತೀಶ್ ಶೆಟ್ಟಿ ಹಾಗೂ ಶಶಿಕಲಾ ಶೆಟ್ಟಿಯವರು ಶಾಲೆಗೆ ತಂದು ವಿದ್ಯಾರ್ಥಿಗಳಿಗೆ ಸಿಹಿತಿಂಡಿ ತಿನಿಸುಗಳನ್ನು ವಿತರಿಸಿ ಕಾರ್ಡ್ಗಳನ್ನು ವಿದ್ಯಾರ್ಥಿಗಳಿಗೆ ಹಸ್ತಾಂತರಿಸಿದ ಇವರಿಗೆ ಹಾಗೂ ಆರ್ಥಿಕವಾಗಿ ಪ್ರೋತ್ಸಾಹಧನ ನೀಡಿ ಸಹಕರಿಸುತ್ತಿರುವ Adobe ಸಂಸ್ಥೆಗೆ ಚೇತನಾ ವಿಶೇಷ ಶಾಲೆ ವತಿಯಿಂದ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇವೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ



















